Friday, May 4, 2018

ಸೋಮವಾರ ಏಪ್ರಿಲ್ 30-2018



  • ಇಸ್ಲಾಮಾಬಾದ್ : ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮವೊಂದನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಆರಂಭಿಸಿ ಭಾರತಕ್ಕೆ ಸೆಡ್ಡು ಹೊಡೆಯಲು ಪಾಕಿಸ್ತಾನ ಸಜ್ಜಾಗಿದೆ. ನೆರೆಯ ಭಾರತದ ಮೇಲೆ ನಿಗಾ ಉದ್ದೇಶ. ನಾಗರಿಕ ಸೇವೆ, ಸೇನಾ ಕಾರ್ಯಾಚರಣೆಗೆ ವಿದೇಶಿ ಉಪಗ್ರಹಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಗುರಿಯನ್ನೂ ಇದು ಹೊಂದಿದೆ. ಭಾರತದ ಉಪಗ್ರಹ ಕಾರ್ಯಕ್ರಮಗಳಿಗೆ ಅಮೆರಿಕ ಇತ್ತೀಚೆಗೆ ಹೆಚ್ಚು ಬೆಂಬಲ ನೀಡುತ್ತಿದೆ. ಆದರೆ ಪಾಕಿಸ್ತಾನದ ಬಾಹ್ಯಾಕಾಶ ಕಾರ್ಯಕ್ರಮಗಳು ಸೀಮಿತವಾಗಿರುವುದು ಕೂಡಾ ಹೊಸ ಕಾರ್ಯಕ್ರಮ ಹಾಕಿಕೊಳ್ಳಲು ಕಾರಣ ಎಂದು ವಿಶ್ಲೇಷಿಸಲಾಗಿದೆ. ಅಮೆರಿಕ ಹಾಗೂ ಫ್ರಾನ್ಸ್ಉಪಗ್ರಹಗಳನ್ನು ಪಾಕಿಸ್ತಾನ ನೆಚ್ಚಿಕೊಂಡಿದೆ. ಪಾಕಿಸ್ತಾನದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಸುಪರ್ಕೊ) 2018–19ನೇ ಸಾಲಿನ ಬಜೆಟ್ನಲ್ಲಿ ₹ 470 ಕೋಟಿ ವ್ಯಯಿಸಲಿದೆ. ಇದರಲ್ಲಿ ₹ 250 ಕೋಟಿ ವೆಚ್ಚದ ಮೂರು ಕಾರ್ಯಕ್ರಮಗಳೂ ಸೇರಿವೆ
  • ದೆಹಲಿ : ಮುಂದಿನ ಏಳರಿಂದ ಹತ್ತು ವರ್ಷಗಳಲ್ಲಿಮ್ಯಾಕ್ 7’ ವೇಗದಲ್ಲಿ ಚಲಿಸುವ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಿದ್ದೇವೆಎಂದು ಬ್ರಹ್ಮೋಸ್ ಏರೊಸ್ಪೇಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ರಷ್ಯಾ ಮತ್ತು ಭಾರತ ಜಂಟಿಯಾಗಿ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ.
  • ನವದೆಹಲಿವಿದೇಶಿ ದೇಣಿಗೆ ಸ್ವೀಕಾರ ಹಾಗೂ ಖರ್ಚಿನ ಲೆಕ್ಕಪತ್ರ ಸಲ್ಲಿಸದೆ ಇರುವುದಕ್ಕಾಗಿ ಬೆಂಗಳೂರಿನ ಇನ್ಫೊಸಿಸ್ ಪ್ರತಿಷ್ಠಾನ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ದೆಹಲಿ ಐಐಟಿ ಸೇರಿ ದೇಶದ 3,292 ಎನ್ಜಿಒಗಳು ಹಾಗೂ ಸಂಸ್ಥೆಗಳಿಗೆ ಗೃಹ ಸಚಿವಾಲಯ ನೋಟಿಸ್ ನೀಡಿದೆ.  
  • ನವದೆಹಲಿ  : ಭಾರತ ಮತ್ತು ಪಾಕಿಸ್ತಾನ ಇದೇ ಮೊದಲ ಬಾರಿಗೆ ಬಹುರಾಷ್ಟ್ರೀಯ ಸಮರಾಭ್ಯಾಸದಲ್ಲಿ ಜತೆಯಾಗಲಿವೆ. ಭಯೋತ್ಪಾದನೆ ತಡೆ ಉದ್ದೇಶದ ಯುದ್ಧ ಕವಾಯತು ರಷ್ಯಾದಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿದೆಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸದಸ್ಯ ರಾಷ್ಟ್ರಗಳು ಸಮರಾಭ್ಯಾಸದಲ್ಲಿ ಭಾಗಿಯಾಗಲಿವೆ. ಇದು ಚೀನಾ ನೇತೃತ್ವದ ಭದ್ರತಾ ಗುಂಪು. ಪಶ್ಚಿಮ ದೇಶಗಳು ಸದಸ್ಯತ್ವ ಹೊಂದಿರುವ ನ್ಯಾಟೊ ಗುಂಪಿಗೆ ಪ್ರತಿಸ್ಪರ್ಧಿಯಾಗಿ ಗುಂಪನ್ನು ರಚಿಸಲಾಗಿದೆಸಮರಾಭ್ಯಾಸವು ರಷ್ಯಾದ ಉರಲ್ಪರ್ವತ ಶ್ರೇಣಿಯಲ್ಲಿ ನಡೆಯಲಿದೆ. ಶಾಂಘೈ ಸಹಕಾರ ಸಂಘಟನೆಯ ಎಲ್ಲ ಎಂಟು ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಯೋಧರು ಜತೆಯಾಗಿ ಕೆಲಸ ಮಾಡಿದ್ದಾರೆ. ಆದರೆ ಒಟ್ಟಾಗಿ ಸಮರಾಭ್ಯಾಸ ನಡೆಸುತ್ತಿರುವುದು ಇದೇ ಮೊದಲುಎಸ್ಸಿಒ ಬಗ್ಗೆ : ರಷ್ಯಾ, ಚೀನಾ, ಕಿರ್ಗಿಸ್ರಿಪಬ್ಲಿಕ್‌, ಕಜಾಕಿಸ್ತಾನ, ತಾಜಿಕಿಸ್ತಾನ ಮತ್ತು ಉಜ್ಬೆಕಿಸ್ತಾನಗಳ ಮುಖ್ಯಸ್ಥರು ಜತೆಯಾಗಿ 2001ರಲ್ಲಿ ಎಸ್ಸಿಒ ಸ್ಥಾಪಿಸಿದರು. ಭಾರತ ಮತ್ತು ಪಾಕಿಸ್ತಾನವನ್ನು ವೀಕ್ಷಕರಾಗಿ 2005ರಲ್ಲಿ ಸೇರಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಎರಡೂ ದೇಶಗಳಿಗೆ ಪೂರ್ಣ ಸದಸ್ಯತ್ವ ನೀಡಲಾಗಿದೆಭಾರತಕ್ಕೆ ಸದಸ್ಯತ್ವ ನೀಡಬೇಕು ಎಂದು ರಷ್ಯಾ ಬಲವಾಗಿ ಪ್ರತಿಪಾದಿಸಿತ್ತು. ಪಾಕಿಸ್ತಾನದ ಪರವಾಗಿ ಚೀನಾ ನಿಂತಿತ್ತು. ವಿಸ್ತರಣೆಯ ಬಳಿಕ, ಜಗತ್ತಿನ ಶೇ 40ರಷ್ಟು ಜನಸಂಖ್ಯೆಯನ್ನು ಗುಂಪು ಪ್ರತಿನಿಧಿಸುತ್ತಿದೆ
  • ಸೋಲ್‌ (ಎಎಫ್ಪಿ) : ಪರಮಾಣು ಪರೀಕ್ಷಾ ಕೇಂದ್ರವನ್ನು ಮೇ ತಿಂಗಳೊಳಗೆ ಮುಚ್ಚುವುದಾಗಿ ಉತ್ತರ ಕೊರಿಯಾ ವಾಗ್ದಾನ ಮಾಡಿದೆ. ಉತ್ತರ ಕೊರಿಯಾದ ನಿರ್ಧಾರಕ್ಕೆ ಅಮೆರಿಕವೂ ಹರ್ಷ ವ್ಯಕ್ತಪಡಿಸಿದೆ. ಜತೆಗೆ ಅಮೆರಿಕದ ಶಸ್ತ್ರಾಸ್ತ್ರ ಪರಿಣತರನ್ನು ತಮ್ಮ ದೇಶಕ್ಕೆ ಆಹ್ವಾನಿಸುವುದಾಗಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿರುವುದಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ಜೇಇನ್ಅವರ ವಕ್ತಾರ ಯೂನ್ಯಂಗ್ಚಾನ್ಹೇಳಿದ್ದಾರೆ. ಮೇ ತಿಂಗಳಲ್ಲಿ ಪರಮಾಣು ಪರೀಕ್ಷಾ ಕೇಂದ್ರ ಮುಚ್ಚಲಾಗುವುದು. ಶೀಘ್ರದಲ್ಲಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ತಜ್ಙರನ್ನು ಆಹ್ವಾನಿಸಿ ವೀಕ್ಷಣೆಗೆ ಅವಕಾಶ ನೀಡಲಾಗುವುದು. ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಮಾಧ್ಯಮದವರನ್ನೂ ಆಹ್ವಾನಿಸಿ, ಇದನ್ನು ಜಾಗತಿಕ ಸಮುದಾಯದ ಎದುರು ಬಹಿರಂಗಪಡಿಸುವುದಾಗಿ ಉತ್ತರ ಕೊರಿಯಾ ನಾಯಕರು ಹೇಳಿದ್ದಾರೆ ಎಂದು ಚಾನ್ ಮಾಹಿತಿ ನೀಡಿದ್ದಾರೆ. ದಕ್ಷಿಣ ಕೊರಿಯಾದ ಪನ್ಮುಂಜೊಮ್ನಲ್ಲಿ ಶುಕ್ರವಾರ ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಕೊರಿಯಾ ಪರ್ಯಾಯ ದ್ವೀಪವನ್ನು ಸಂಪೂರ್ಣ ಅಣ್ವಸ್ತ್ರ ಮುಕ್ತಗೊಳಿಸಲು ಬದ್ಧವಿರುವುದಾಗಿ ಉಭಯ ನಾಯಕರು ಘೋಷಣೆ ಮಾಡಿದ್ದರು
  • ಲಾಹೋರ್ : ಮುಂಬೈ ದಾಳಿ ಪ್ರಕರಣದಲ್ಲಿ ಫೆಡರಲ್ತನಿಖಾ ಸಂಸ್ಥೆ (ಎಫ್ಐಎ) ಪರವಾಗಿ ವಾದಿಸುತ್ತಿದ್ದ ಮುಖ್ಯ ವಕೀಲ ಚೌಧರಿ ಅಜರ್ ಅವರನ್ನು ಪಾಕಿಸ್ತಾನದ ಆಂತರಿಕ ಸಚಿವಾಲಯ ಏಕಾಏಕಿ ಕಿತ್ತೊಗೆದಿದೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದ ಭಾರತಕ್ಕೆ ಇದರಿಂದ ಹಿನ್ನಡೆ ಆದಂತಾಗಿದೆ. ‘ಸರ್ಕಾರದ ಕಡೆಯಿಂದ ಅವರನ್ನು ನೇಮಕ ಮಾಡಿಲ್ಲ ಎಂಬ ಕಾರಣ ನೀಡಿ ತೆಗೆದು ಹಾಕಲಾಗಿದೆಎಂದು ಸಚಿ ವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಲಷ್ಕರ್ ತೈಯಬ ಸಂಘಟನೆಯ 10 ಉಗ್ರರು ಕರಾಚಿಯಿಂದ ಮುಂಬೈಗೆ ಬಂದು 2008 ನವೆಂಬರ್ನಲ್ಲಿ ದಾಳಿ ನಡೆಸಿದ್ದರು. 166 ಜನ ಮೃತಪಟ್ಟು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಪ್ರಕರಣದಲ್ಲಿ 2009ರಿಂದಲೂ ಮುಖ್ಯ ವಕೀಲರಾಗಿ ಚೌಧರಿ ಅಜರ್ ವಾದಿಸುತ್ತಿದ್ದರು
  • ಚೆನ್ನೈ : ಭಾರತದ ಸಿ. . ಭವಾನಿದೇವಿ ಅವರು ಐಸ್ಲ್ಯಾಂಡ್ ರೇಕ್ಜಾವಿಕ್ನಲ್ಲಿ ನಡೆಯುತ್ತಿರುವ ಟೌರ್ನೊಯಿ ಸ್ಯಾಟ್ಲೈಟ್ವಿಶ್ವ ಫೆನ್ಸಿಂಗ್ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ
  • ನವದೆಹಲಿ : ಭಾರತದ ಬಾಕ್ಸರ್ಗಳಾದ ಸುಮಿತ್ಸಾಂಗ್ವಾನ್‌, ನಿಖತ್ಝರೀನ್ಹಾಗೂ ಹಿಮಾಂಶು ಶರ್ಮಾ ಅವರು ಸರ್ಬಿಯಾದಲ್ಲಿ ನಡೆಯುತ್ತಿರುವ 56ನೇ ಬೆಲ್ಗ್ರೆಡ್ಅಂತರರಾಷ್ಟ್ರೀಯ ಬಾಕ್ಸಿಂಗ್ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದು, ಐದು ಮಂದಿ ಬಾಕ್ಸರ್ಗಳು ಬೆಳ್ಳಿ ಪದಕ ಗೆದ್ದಿದ್ದಾರೆ
  • ಬಾರ್ಸಿಲೋನಾ : ಮಿಂಚಿನ ಆಟ ಆಡಿದ ಸ್ಪೇನ್ ರಫೆಲ್ನಡಾಲ್‌, ಬಾರ್ಸಿಲೋನಾ ಟೆನಿಸ್ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ವಿಭಾಗದ ಫೈನಲ್ಹಣಾಹಣಿಯಲ್ಲಿ ನಡಾಲ್‌ 6–2, 6–1 ನೇರ ಸೆಟ್ಗಳಿಂದ ಸ್ಟೆಫಾನೊಸ್ಸಿಟ್ಸಿಪಸ್ಅವರನ್ನು ಸೋಲಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಒಟ್ಟಾರೆ 11ನೇ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಮಣ್ಣಿನಂಕಣದಲ್ಲಿ ನಡಾಲ್ಆಡಿದ 55ನೇ ಫೈನಲ್ಪಂದ್ಯ ಇದಾಗಿತ್ತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ ನಡಾಲ್‌.

1 comment:

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...