Tuesday, May 15, 2018

ಬುಧವಾರ ಮೇ 16-2018



  • ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದೆ. 222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಮೂಡಿ ಬಂದ ಬಿಜೆಪಿ ರಾಜ್ಯಪಾಲರನ್ನು ಭೇಟಿಯಾಗಿ ಅಧಿಕಾರ ರಚನೆಯ ಹಕ್ಕು ಮಂಡಿಸಿದೆ. ಮೈತ್ರಿಗೆ ಮುಂದಾಗಿರುವ ಜೆಡಿಎಸ್ಕಾಂಗ್ರೆಸ್ ನಾಯಕರ ನಿಯೋಗ, ರಾಜಭವನಕ್ಕೆ ತೆರಳಿ ತಮ್ಮ ಹಕ್ಕನ್ನು ಪ್ರತಿಪಾದಿಸಿದೆ. ಇದೀಗ ಚೆಂಡು ರಾಜಭವನದ ಅಂಗಳದಲ್ಲಿದೆ. ಸರ್ಕಾರ ರಚನೆಗೆ 112 ಸದಸ್ಯ ಬಲ ಬೇಕಾಗಿದೆ. ಸಂಜೆಯವರೆಗೂ ಮುನ್ನಡೆಹಿನ್ನಡೆಯ ತೂಗುಯ್ಯಾಲೆ ನಡೆಯಿತಾದರೂ ಅಗತ್ಯ ಸಂಖ್ಯಾಬಲ ತಲುಪಲು ಬಿಜೆಪಿಗೆ ಸಾಧ್ಯವಾಗಲಿಲ್ಲ. 2013 ಚುನಾವಣೆಯಲ್ಲಿ 122 ಸ್ಥಾನ ಪಡೆದು ಐದು ವರ್ಷ ಆಳಿದ ಕಾಂಗ್ರೆಸ್‌ 78 ಕ್ಕೆ ತೃಪ್ತಿ ಪಟ್ಟುಕೊಂಡಿದೆ. ಆದರೂ ಅಧಿಕಾರ ಹಿಡಿಯಲೇಬೇಕು ಎಂಬ ಹಟದಲ್ಲಿರುವ ಪಕ್ಷ , ಕೇವಲ 38 ಸ್ಥಾನ ಗಳಿಸಿರುವ ಜೆಡಿಎಸ್ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ಮೈತ್ರಿಗೆ ಮುಂದಾಗಿದೆ.
  • ನವದೆಹಲಿಮೂವತ್ತು ವರ್ಷಗಳ ಹಿಂದಿನ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸರ್ಕಾರದ ಸಚಿವ ನವಜೋತ್ ಸಿಂಗ್ ಸಿಧು ಅವರನ್ನು 3 ದೋಷಿ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕಟಿಸಿದೆ. ₹ 1 ಸಾವಿರ ದಂಡ ವಿಧಿಸಿದ್ದು, ಜೈಲು ಶಿಕ್ಷೆಯಿಂದ ಸಿಧು ಪಾರಾಗಿದ್ದಾರೆ.  1988ರಲ್ಲಿ 65 ವರ್ಷದ ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲಿ ಥಳಿಸಿದ ಆರೋಪ ಸಿಧು ಮೇಲಿತ್ತು. ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರುಉದ್ದೇಶಪೂರ್ವಕವಲ್ಲದ ಹತ್ಯೆ ಆರೋಪದಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಿಧು ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
  • ನವದೆಹಲಿ : ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಖ್ಯಸ್ಥರಾಗಿ ಭಾರತದ ಶಶಾಂಕ್ಮನೋಹರ್ಅವಿರೋಧವಾಗಿ ಮರು ಆಯ್ಕೆ ಆಗಿದ್ದಾರೆ. ವಿಷಯವನ್ನು ಐಸಿಸಿ ಮಂಗಳವಾರಪ್ರಕಟಿಸಿದ್ದು ಅವರ ಅಧಿಕಾರದ ಅವಧಿಯು ಎರಡು  ವರ್ಷದ್ದಾಗಿರುತ್ತದೆ. 2016ರಲ್ಲಿ ಐಸಿಸಿಯ ಮೊದಲ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶಶಾಂಕ್ ಬಾರಿ ಮರು ಆಯ್ಕೆ ಬಯಸಿದ್ದ ಏಕೈಕ ಅಭ್ಯರ್ಥಿಯಾಗಿದ್ದರು.

No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...