Tuesday, May 8, 2018

ಭಾನುವಾರ ಮೇ 06-2018



  • ಬೆಂಗಳೂರು: ‘ಮಹದಾಯಿ ಜಲ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಲು ಬಿಜೆಪಿ ಬದ್ಧಎಂದು ಗದಗದಲ್ಲಿ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಹೇಮಾವತಿ ಮತ್ತು ನೇತ್ರಾವತಿ ನದಿಗಳ ಜೋಡಣೆ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುತ್ತೇವೆಎಂದು ತುಮಕೂರಿನಲ್ಲಿ ಘೋಷಿಸಿದರು. ಎಂಟು ಜಿಲ್ಲೆಗಳಿಗೆ ಅನುಕೂಲ : ‘ಹೇಮಾವತಿ ಮತ್ತು ನೇತ್ರಾವತಿ ನದಿಗಳ ಜೋಡಣೆಯಿಂದ ತುಮಕೂರು ಮತ್ತು ಆಸುಪಾಸಿನ ಎಂಟು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ’.
  • ಹೈದರಾಬಾದ್‌ : ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನವೆಂದು ಗುರುತಿಸಲಾಗುವ ತಿರುಪತಿಯ ತಿರುಮಲ ದೇವಸ್ಥಾನ ಮತ್ತು ಅದರ ಅಧೀನ ದೇವಸ್ಥಾನಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್) ಮುಂದಾಗಿದೆ. ದೇವಸ್ಥಾನಗಳ ಐತಿಹಾಸಿಕ ಸ್ವರೂಪ ಮತ್ತು ಪ್ರಾಚೀನತೆ ಸಂರಕ್ಷಿಸಲು ಇಲಾಖೆ ನಿರ್ಧಾರಕ್ಕೆ ಬಂದಿದೆ. ಆಂಧ್ರ ಪ್ರದೇಶ ಸರ್ಕಾರ ನೇಮಕ ಮಾಡಿರುವ ಆಡಳಿತ ಮಂಡಳಿಯು ಅನೇಕ ವರ್ಷಗಳಿಂದ ದೇವಸ್ಥಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.
  • ನವದೆಹಲಿ : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸದ ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರ ಮನೆ ವಿಳಾಸಕ್ಕೆ ಪ್ರಶಸ್ತಿ ಮತ್ತು ಫಲಕಗಳನ್ನು ಅಂಚೆ ಮೂಲಕ ರವಾನಿಸಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.
  • ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರದಾನ ಮಾಡುವುದು ಸಂಪ್ರದಾಯ. ಆದರೆ, ಬಾರಿ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಎಲ್ಲರಿಗೂ ರಾಷ್ಟ್ರಪತಿ ಅವುಗಳನ್ನು ಪ್ರದಾನ ಮಾಡುವುದಿಲ್ಲ ಎಂಬ ವಿಷಯ ಬಹಿರಂಗವಾದ ನಂತರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ರಾಷ್ಟ್ರಪತಿಯವರೇ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಒತ್ತಾಯಿಸಿ 70 ಮಂದಿ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಆದರೆ, ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಆಗದ ಕಾರಣ 60 ಮಂದಿ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ರಾಷ್ಟ್ರಪತಿ ರಾಮನಾಥ ಕೋವಿಂದ್ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಇದನ್ನು ಪ್ರತಿಭಟಿಸಿ ಅನೇಕರು ಪ್ರಶಸ್ತಿ ಸ್ವೀಕರಿಸಿರಲಿಲ್ಲ.
  • ನವದೆಹಲಿ : ದೇಶದಲ್ಲಿಒಂದು ದೇಶಒಂದು ಶೈಕ್ಷಣಿಕ ಮಂಡಳಿನೀತಿ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಬಿಜೆಪಿ ನಾಯಕ ಅಶ್ವಿನ್ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ‘ದೇಶದ ಎಲ್ಲ ಮಕ್ಕಳಿಗೂ ಯಾವುದೇ ತಾರತಮ್ಯವಿಲ್ಲದೆ ಒಂದೇ ಗುಣಮಟ್ಟದ ಶಿಕ್ಷಣ ದೊರೆಯಬೇಕು. ದೇಶಕ್ಕೊಂದು, ಆಯಾ ರಾಜ್ಯಕ್ಕೊಂದು ಶೈಕ್ಷಣಿಕ ಮಂಡಳಿ ಇದ್ದರೆ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ನೀಡಲು ಸಾಧ್ಯವಿಲ್ಲಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
  • ಮುಂಬೈ : ಪಶ್ಚಿಮ ರೈಲ್ವೆ ವಲಯವು ಇಲ್ಲಿನ ಚರ್ಚ್ಗೇಟ್ಮತ್ತು ಬೊರಿವಲಿ ನಿಲ್ದಾಣಗಳ ನಡುವೆ ಮಹಿಳಾ ಪ್ರಯಾಣಿಕರಿಗಾಗಿಯೇ ಪರಿಚಯಿಸಿದ ವಿಶ್ವದ ಮೊದಲ ಮಹಿಳಾ ವಿಶೇಷ ರೈಲಿಗೆ ಶನಿವಾರ 26 ವರ್ಷ ತುಂಬಿತು. ಪಶ್ಚಿಮ ರೈಲ್ವೆಯು 1992 ಮೇ 5ರಂದು ಎರಡು ನಿಲ್ದಾಣಗಳ ನಡುವೆ ಮಹಿಳಾ ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಉಪನಗರ ರೈಲು ಸಂಚಾರ ಆರಂಭಿಸಿತ್ತು. ಆರಂಭದಲ್ಲಿ ರೈಲು ದಿನಕ್ಕೆ ಎರಡು ಬಾರಿ ಸಂಚರಿಸುತ್ತಿತ್ತು. ಈಗ ಸಂಚಾರ ಸಂಖ್ಯೆ ಹೆಚ್ಚಿಸಿದ್ದು, ಬೆಳಗಿನ ದಟ್ಟಣೆ ಅವಧಿಯಲ್ಲಿ 4 ಮತ್ತು ಸಂಜೆಯ ದಟ್ಟಣೆ ಅವಧಿಯಲ್ಲಿ 4 ಬಾರಿ ಸೇರಿ ದಿನಕ್ಕೆ 8 ಸಲ ಸಂಚಾರ  ನಡೆಸುತ್ತಿದೆ. ಚರ್ಚ್ಗೇಟ್ಮತ್ತು ಬೊರಿವಲಿ ನಡುವೆ ಸಂಚರಿಸುತ್ತಿದ್ದ ಮಹಿಳಾ ವಿಶೇಷ ರೈಲನ್ನು 1993ರಲ್ಲಿ ವಿರರ್ನಿಲ್ದಾಣಕ್ಕೂ ವಿಸ್ತರಿಸಲಾಗಿತ್ತು.  ‘ಇಡೀ ರೈಲನ್ನು ಮಹಿಳಾ ಪ್ರಯಾಣಿಕರಿಗೆ ಅರ್ಪಿಸಿ, ಪಶ್ಚಿಮ ರೈಲ್ವೆಯು ಇತಿಹಾಸ ನಿರ್ಮಿಸಿದೆ. ಬೇರೆ ರೈಲ್ವೆ ವಲಯಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ವಿಶ್ವದ ಯಾವುದೇ ಉಪನಗರ ರೈಲು ಸಂಚಾರ ಸೇವೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ರೀತಿ, ದಟ್ಟಣೆಯ ಮಾರ್ಗದಲ್ಲಿ ನಿರಂತರ ಸೇವೆ ಒದಗಿಸಿ, 26 ವರ್ಷ ಪೂರೈಸಿರುವುದು ಒಂದು ಮೈಲುಗಲ್ಲುಎಂದು ಪಶ್ಚಿಮ ರೈಲ್ವೆಯ ಮುಖ್ಯ ವಕ್ತಾರ ರವೀಂದ್ರ ಭಾಕರ್ತಿಳಿಸಿದ್ದಾರೆ.
  • ವಾಷಿಂಗ್ಟನ್‌  : ಭಾರತ ಸಂಜಾತ ಎಂಜಿನಿಯರ್ಶ್ರೀನಿವಾಸ ಕೂಚಿಬೊಟ್ಲ ಅವರನ್ನು ಹತ್ಯೆ ಮಾಡಿದ್ದ ಆರೋಪಿ ಆ್ಯಡಂ ಪ್ಯುರಿಂಟನ್ಗೆ (52) ಶನಿವಾರ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಯ ಅವಧಿ 78 ವರ್ಷವಾಗಿದ್ದು, ಆ್ಯಡಂಗೆ 100 ವರ್ಷ ಆಗುವವರೆಗೂ ಪೆರೋಲ್ನೀಡಲು ನಿರ್ಬಂಧವಿದೆ. 2017 ಫೆಬ್ರುವರಿ 22ರಂದು ಕಾನ್ಸಸ್ ಬಾರ್ವೊಂದರ ಸಮೀಪ ಕೂಚಿಬೊಟ್ಲ ಮತ್ತು ಅವರ ಸ್ನೇಹಿತ ಅಲೋಕ್ ಮದಸಾನಿ ಮೇಲೆ ಆ್ಯಡಂ ಗುಂಡಿನ ದಾಳಿ ನಡೆಸಿದ್ದ. ದಾಳಿಯಿಂದಾಗಿ ಕೂಚಿಬೊಟ್ಲ ಮೃತಪಟ್ಟು, ಅಲೋಕ್ ಹಾಗೂ ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು
  • ವ್ಯಾಂಡೆನ್ಬರ್ಗ್ವಾಯುನೆಲೆ, ಅಮೆರಿಕ : ಮಂಗಳ ಗ್ರಹದ ಕಂಪನಗಳು ಮತ್ತು ತಾಪಮಾನದ ಕುರಿತ ಅಧ್ಯಯನ ನಡೆಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಾಸಾಶನಿವಾರಇನ್ಸೈಟ್‌’ ಗಗನನೌಕೆಯನ್ನು ಉಡಾವಣೆ ಮಾಡಿದೆ. ಮಂಗಳ ಗ್ರಹದ ಮೇಲ್ಪದರ, ಮಣ್ಣು, ತಾಪಮಾನ ಮುಂತಾದವುಗಳ ಅಧ್ಯಯನಕ್ಕೆ ₹6635 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದೆ. ಯೋಜನೆಯ ಪ್ರಕಾರ ಎಲ್ಲವೂ ಯಶಸ್ವಿಯಾಗಿ ನಡೆದರೆ, ನವೆಂಬರ್‌ 26ರಂದು ಗಗನನನೌಕೆ ಮಂಗಳಗ್ರಹದಲ್ಲಿ ಇಳಿಯಲಿದೆ. ಗಗನನೌಕೆಯಲ್ಲಿ 16 ಅಡಿ ಆಳದವರೆಗೂ ಮಣ್ಣು ಅಗೆಯುವ ರೋಬೊಟ್ ಮತ್ತು ಕಂಪನಗಳನ್ನು ಅಳೆಯುವ ಸಾಧನ ಸಿಸ್ಮೊಗ್ರಾಫ್ ಇವೆ. ‘ಮಂಗಳನ ಅಂಗಳಕ್ಕೆ ಮೊದಲೂ ಗಗನನೌಕೆಗಳನ್ನು ಕಳುಹಿಸಲಾಗಿತ್ತು. ಅವು ಕಂಪನಗಳು, ಭುಕುಸಿತ ಮುಂತಾದವುಗಳ ಕುರಿತು ಅಧ್ಯಯನ ನಡೆಸಿವೆ. ಆದರೆ ಕಂಪನಗಳು ಹೇಗೆ ಸಂಭವಿಸುತ್ತವೆ ಎಂಬುದನ್ನು ಅವು ತಿಳಿಸಿರಲಿಲ್ಲ. ಹಾಗಾಗಿ ನೌಕೆಯನ್ನು ಕಳುಹಿಸಲಾಗಿದೆಎಂದು ನಾಸಾದ ಮುಖ್ಯ ವಿಜ್ಞಾನಿ ಜಿಮ್ ಗ್ರೀನ್ ತಿಳಿಸಿದ್ದಾರೆ.
  • ಪಹೊವಾ, ಹವಾಯಿ : ಕೈಲೆಯಾ ಜ್ವಾಲಾಮುಖಿಯಿಂದ ಯಾವಾಗ ಬೇಕಾದರೂ ಲಾವಾರಸ ಹೊರಬರುವ ಸಾಧ್ಯತೆ ಇದ್ದು, ಹವಾಯಿ ದ್ವೀಪದ (ಹವಾಯಿ ಬಿಗ್ ಐಲ್ಯಾಂಡ್) ವಿವಿಧ ಪ್ರದೇಶಗಳ ನಿವಾಸಿಗಳು ಕಟ್ಟೆಚ್ಚರ ವಹಿಸುವಂತೆ ಹವಾಯಿ ಜ್ವಾಲಾಮುಖಿ ವೀಕ್ಷಣಾಲಯ ಸೂಚಿಸಿದೆ. ದ್ವೀಪದ ಆಗ್ನೇಯ ಭಾಗದ ವಿವಿಧ ಪ್ರದೇಶಗಳಲ್ಲಿ ಗುರುವಾರ ಪ್ರಬಲ ಜ್ವಾಲಾಮುಖಿ ಉಂಟಾಗಿತ್ತು. ಪಹೋವಾ ಪಟ್ಟಣದಲ್ಲಿ 6.9ರಷ್ಟು ತೀವ್ರತೆಯ ಭೂಕಂಪದ ಜತೆ, ಲಾವಾರಸ ಹರಿದು ಬಂದಿತ್ತು. ಹೀಗಾಗಿ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು.
  • ವಾಷಿಂಗ್ಟನ್‌  : ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ 17 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟವಾದ ಶೇ 3.9ಕ್ಕೆ ಇಳಿಕೆಯಾಗಿದೆ. ದೇಶದ ಉದ್ದಿಮೆಗಳು ಪ್ರಸಕ್ತ ತಿಂಗಳು 1.64 ಲಕ್ಷ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. ಮಾರುಕಟ್ಟೆ ತಜ್ಞರ ಪ್ರಕಾರ 1.90 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಏಪ್ರಿಲ್‌  ತಿಂಗಳಿನಲ್ಲಿ ಕಡಿಮೆಯಾಗಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ.
  • ಇಸ್ಲಾಮಾಬಾದ್‌ : ಅರವತ್ತು ಜನರ ಸಾವಿಗೆ ಕಾರಣರಾಗಿದ್ದ ಹನ್ನೊಂದು ಭಯೋತ್ಪಾದಕರಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಮರಣದಂಡನೆ ವಿಧಿಸಿದ್ದಾರೆ. ಪಾಕಿಸ್ತಾನ ಶಸ್ತ್ರಾಸ್ತ್ರ ಪಡೆಗಳ ಕಚೇರಿ ಹಾಗೂ ಮಲಕಂದ್ವಿಶ್ವವಿದ್ಯಾಲಯ ಕಟ್ಟಡದ ಮೇಲೆ ದಾಳಿ ನಡೆಸಿದ್ದ ಉಗ್ರರು, 36 ನಾಗರಿಕರು ಹಾಗೂ 24 ಅಧಿಕಾರಿಗಳ ಸಾವಿಗೆ ಕಾರಣರಾಗಿದ್ದರು.ಖೈಬರ್ಪ್ರಾಂತ್ಯದ ವಿಧಾನಸಭೆ ಸದಸ್ಯ ಇಮ್ರಾನ್ಖಾನ್ಮೊಹ್ಮಿಂದ್ಕೂಡ ದಾಳಿಯಲ್ಲಿ ಅಸುನೀಗಿ
  • ದ್ದಲ್ಲದೆ, 142 ಜನರು ಗಾಯಗೊಂಡಿದ್ದರು. 2014 ಡಿಸೆಂಬರ್ನಲ್ಲಿ ಪೆಷಾವರದ ಶಾಲೆ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಮೂವರು ಆರೋಪಿಗಳಿಗೆ ಸೇನಾ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿ ಆದೇಶಿಸಿದೆ.
  • ನವದೆಹಲಿ : ವಿವಿಧ ಹೂಡಿಕೆ ಕೊಡುಗೆಗಳ ಬಗ್ಗೆ ಆರ್ಥಿಕ ಸಲಹೆ ಪಡೆಯುವ ಉದ್ದೇಶದಿಂದ ಆರ್ಪ್ವುಡ್ಕ್ಯಾಪಿಟಲ್ಪ್ರೈವೇಟ್ಲಿಮಿಟೆಡ್ಸಂಸ್ಥೆಯನ್ನು ನೇಮಿಸಿದೆ. ಸಂಸ್ಥೆಯು ವಿವಿಧ ಸಂಸ್ಥೆಗಳು ನೀಡಿರುವ ಮತ್ತು ನೀಡಲಿರುವ ಹೂಡಿಕೆ ಕೊಡುಗೆಗಳ ಬಗ್ಗೆ ತನ್ನ ಸ್ವತಂತ್ರವಾದ ಅಭಿಪ್ರಾಯಗಳನ್ನು ನೀಡಲಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...