Tuesday, May 8, 2018

ಸೋಮವಾರ ಮೇ 07-2018



  • ದತ್ತು ಪಡೆಯುವವರಿಗೆ ಹೆಣ್ಣು ಮಕ್ಕಳೇ ಅಚ್ಚುಮೆಚ್ಚು. ಒಟ್ಟು ದತ್ತು ಪ್ರಮಾಣದಲ್ಲಿ ಶೇ 60ರಷ್ಟು ಹೆಣ್ಣು ಮಕ್ಕಳೇ ಇದ್ದಾರೆ ಎಂಬುದು ಆರು ವರ್ಷಗಳ ಅಂಕಿ ಅಂಶದಿಂದ ಸ್ಪಷ್ಟವಾಗುತ್ತದೆ. ಇದೇ ಅವಧಿಯಲ್ಲಿ ದತ್ತು ನೀಡಲಾದ ಮಕ್ಕಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ಮಕ್ಕಳ ದತ್ತು ಪ್ರಾಧಿಕಾರ ನೀಡಿದೆಕಳೆದ ಸಾಲಿನಲ್ಲಿ (2017–18) ಹೆಚ್ಚು ಮಕ್ಕಳನ್ನು ದತ್ತು ನೀಡಲಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ದತ್ತಕ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿರುವುದುರಿಂದ ಇದು ಸಾಧ್ಯವಾಗಿದೆ ಎಂದು ಪ್ರಾಧಿಕಾರ ಹೇಳಿದೆ. 642 ಮಹಾರಾಷ್ಟ್ರದಲ್ಲಿ ದತ್ತು ನೀಡಲಾದ ಮಕ್ಕಳು (353 ಹೆಣ್ಣುಮಕ್ಕಳನ್ನು ದತ್ತು ನೀಡಲಾಗಿದೆ) 286 ಕರ್ನಾಟಕದಲ್ಲಿ ದತ್ತು ನೀಡಲಾದ ಮಕ್ಕಳು (167 ಹೆಣ್ಣುಮಕ್ಕಳನ್ನು ದತ್ತು ನೀಡಲಾಗಿದೆ)
  • ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಾಸಾಮಂಗಳಗ್ರಹದ ಕಂಪನಗಳ ಅಧ್ಯಯನಕ್ಕೆ ಶನಿವಾರ ಉಡಾವಣೆ ಮಾಡಿರುವಇನ್ಸೈಟ್ಗಗನನೌಕೆ ಜತೆಗೆಕ್ಯೂಬ್ಸ್ಯಾಟ್ಸ್‌’ ಹೆಸರಿನ ಸಣ್ಣಗಾತ್ರದ ಎರಡು ಉಪಗ್ರಹಗಳನ್ನೂ ಉಡಾವಣೆ ಮಾಡಿದೆ. ಉಪಗ್ರಹಗಳು ಸೌರಮಂಡಲ ಪ್ರವೇಶಿಸಿದ್ದು, ಸಮರ್ಥವಾಗಿವೆ ಎಂಬ ಕುರಿತುನಾಸಾರೇಡಿಯೊ ಸಂದೇಶ ಸ್ವೀಕರಿಸಿದೆ. ಕ್ಯಾಲಿಫೋರ್ನಿಯಾದ ವ್ಯಾಂಡೆನ್ಬರ್ಗ್ವಾಯುನೆಲೆಯಿಂದ ಇನ್ಸೈಟ್ಗಗನನೌಕೆ ಜತೆಗೆ ಎರಡು ಉಪಗ್ರಹಗಳನ್ನು ಒಳಗೊಂಡಿದ್ದಮಾರ್ಸ್ ಕ್ಯೂಬ್ ಒನ್‌’ ಎಂಬ ಗಗನನೌಕೆಯನ್ನೂ ಉಡಾವಣೆ ಮಾಡಲಾಗಿತ್ತು. ಇದರಲ್ಲಿ ಬ್ರೀಫ್ಕೇಸ್ಗಾತ್ರದ ಮಾರ್ಕೊ ಮತ್ತು ಮಾರ್ಕೊಬಿ ಎಂಬ ಎರಡು ಉಪಗ್ರಹಗಳಿವೆ. ಇವನ್ನು ಒಟ್ಟಾಗಿಮಾರ್ಕೊ ಕ್ಯೂಬ್ಸ್ಯಾಟ್ಸ್‌’ ಎಂದು ಹೆಸರಿಸಲಾಗಿದೆ.
  • ನವದೆಹಲಿ : ಪ್ರಾಪ್ತ ವಯಸ್ಸಿನ ಗಂಡು, ಹೆಣ್ಣು ವಿವಾಹ ಆಗದಿದ್ದರೂ ಸಹಬಾಳ್ವೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ಸ್ಪಷ್ಟಪಡಿಸಿದೆ. ಗಂಡು, ಹೆಣ್ಣಿನ ಒಪ್ಪಿತ ಸಹಜೀವನಕ್ಕೆ ಕಾನೂನು ಕೂಡ ಸಮ್ಮತಿ ನೀಡಿದೆ ಎಂದು ನ್ಯಾಯಮೂರ್ತಿಗಳಾದ .ಕೆ. ಸಿಕ್ರಿ ಮತ್ತು ಅಶೋಕ್ಭೂಷಣ್ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಹೇಳಿದೆ. ಕಾನೂನು ಪ್ರಕಾರ ಇನ್ನೂ ಮದುವೆಯ ವಯಸ್ಸು ಆಗಿಲ್ಲ ಎಂಬ ಕಾರಣ ನೀಡಿ ಮದುವೆ ರದ್ದುಗೊಳಿಸಿದ್ದ ಹೈಕೋರ್ಟ್ತೀರ್ಪು ಪ್ರಶ್ನಿಸಿ ಕೇರಳದ ನಂದಕುಮಾರ್ಎಂಬುವರು ಮೇಲ್ಮನವಿ ಸಲ್ಲಿಸಿದ್ದರು. ಮದುವೆ ವೇಳೆ ನಂದಕುಮಾರ್ಗೆ ಇನ್ನೂ 21 ವರ್ಷ ವಯಸ್ಸಾಗಿಲ್ಲ ಎಂಬ ಕಾರಣದಿಂದ ಅವರ ಪತ್ನಿ ತುಷಾರಾ ಅವರನ್ನು ಪೋಷಕರ ವಶಕ್ಕೆ ಒಪ್ಪಿಸುವಂತೆ ಕೇರಳ ಹೈಕೋರ್ಟ್ನಿರ್ದೇಶನ ನೀಡಿತ್ತು. ಹೈಕೋರ್ಟ್ ತೀರ್ಪು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ದ್ವಿಸದಸ್ಯ ಪೀಠ, ನಂದಕುಮಾರ್ಮತ್ತು ತುಷಾರಾ ಇಬ್ಬರೂ ಪ್ರಾಪ್ತ ವಯಸ್ಸಿನವರಾಗಿದ್ದು, ಮದುವೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
  • ನವದೆಹಲಿ : ಭಾರತದ ಅರ್ಜುನ್ಖಾಡೆ, ನೈಜೀರಿಯಾದ ಅಬುಜಾದಲ್ಲಿ ನಡೆದ ಐಟಿಎಫ್ಫ್ಯೂಚರ್ಸ್ಟೆನಿಸ್ಟೂರ್ನಿಯಲ್ಲಿ ರನ್ನರ್ಅಪ್ಆಗಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ವಿಭಾಗದ ಫೈನಲ್ನಲ್ಲಿ ಅರ್ಜುನ್‌ 3–6, 1–6 ನೇರ ಸೆಟ್ಗಳಿಂದ ಬ್ರೆಜಿಲ್ ಜಾವೊ ಮೆನೆಂಜೆಸ್ವಿರುದ್ಧ ಪರಾಭವಗೊಂಡರು.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...