Sunday, May 13, 2018

ಭಾನುವಾರ ಮೇ 13-2018



  • ಇಂದೋರ್ : ಅತ್ಯಾಚಾರಗಳ ಬಗ್ಗೆ ಇರುವಷ್ಟೇ ಆಕ್ರೋಶ, ಪ್ರಕರಣಗಳ ವಿಳಂಬಗತಿಯ ವಿಚಾರಣೆ, ವರ್ಷಗಳ ನಂತರ ತೀರ್ಪು ಪ್ರಕಟವಾಗುವ ಕುರಿತೂ ಇದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಹಸುಳೆ ಮೇಲಿನ ಅತ್ಯಾಚಾರ ಪ್ರಕರಣವೊಂದರ ತೀರ್ಪು ಕೇವಲ 22 ದಿನಗಳಲ್ಲಿ ಪ್ರಕಟವಾಗಿದೆ. ಮೂರು ತಿಂಗಳ ಹಸುಳೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಇಂದೋರ್ ಸೆಷನ್ಸ್ನ್ಯಾಯಾಲಯ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆತ್ವರಿತವಾಗಿ ವಿಚಾರಣೆ ನಡೆಸಿರುವ ಹೆಚ್ಚುವರಿ ಸೆಷನ್ಸ್ನ್ಯಾಯಾಧೀಶರಾದ ವರ್ಷಾ ಶರ್ಮಾ ತೀರ್ಪು ನೀಡಿದ್ದಾರೆಅಪರಾಧಿ ನವೀನ್ಗಡ್ಕೆಗೆ (26) ಐಪಿಸಿ ಸೆಕ್ಷನ್‌ 376() ಮತ್ತು ಸೆಕ್ಷನ್‌ 302 ಮತ್ತು ಪೋಕ್ಸೊ ಕಾಯ್ದೆ ಅಡಿ ಶಿಕ್ಷೆ ವಿಧಿಸಲಾಗಿದೆ. ‘ಇಂತಹ ಕ್ರೂರಿಗಳು ಗ್ಯಾಂಗ್ರಿನ್ಇದ್ದಂತೆ. ಗ್ಯಾಂಗ್ರಿನ್ಪೀಡಿತ ಭಾಗಗಳನ್ನು ವೈದ್ಯರು ಹೇಗೆ ಕತ್ತರಿಸಿ ತೆಗೆಯುತ್ತಾರೊ, ಅದೇ ರೀತಿ ಸಮಾಜವನ್ನು ಸುರಕ್ಷಿತವಾಗಿಡಲು ಇಂತಹವರನ್ನು ದೂರವಿಡಬೇಕು. ಇಂತಹ ವ್ಯಕ್ತಿ ಸಮಾಜಕ್ಕೆ ಮಾರಕಎಂದು ತೀರ್ಪಿನಲ್ಲಿ ಹೇಳಲಾಗಿದೆ.
  • ನವದೆಹಲಿ : ವೃದ್ಧ ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ವಿಧಿಸುತ್ತಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಆರು ತಿಂಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವುಪೋಷಕರ ಯೋಗಕ್ಷೇಮ, ನಿರ್ವಹಣೆ ಮತ್ತು ಹಿರಿಯ ನಾಗರಿಕರ ಕಾಯ್ದೆ(2007)'ಗೆ ತಿದ್ದುಪಡಿ ತರಲು ಮುಂದಾಗಿದೆ. ಮಕ್ಕಳು ಮತ್ತು ಅವರ ಹೊಣೆಗಾರಿಕೆ ವ್ಯಾಖ್ಯಾನವನ್ನೂ ವಿಸ್ತರಿಸಲು ಚಿಂತನೆ ನಡೆಸಿದ್ದು, ದತ್ತು ಮಕ್ಕಳು, ಮಲಮಕ್ಕಳು, ಅಳಿಯ, ಸೊಸೆಯನ್ನು ಸಹ ವ್ಯಾಪ್ತಿಗೆ  ತರಲು ಚಿಂತನೆ ನಡೆಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆಸದ್ಯ ಜಾರಿಯಲ್ಲಿರುವ ಕಾಯ್ದೆಯಲ್ಲಿ ಹೆತ್ತ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಮಾತ್ರ ಹೊಣೆಗಾರಿಕೆ ನಿಗದಿ ಮಾಡಲಾಗಿದೆ. ಹೊಣೆ ಹೊತ್ತುಕೊಳ್ಳದ ಮಕ್ಕಳು, ಪೋಷಕರಿಗೆ ಪ್ರತಿ ತಿಂಗಳು ₹10 ಸಾವಿರ ಗರಿಷ್ಠ ನಿರ್ವಹಣಾ ವೆಚ್ಚ ನೀಡಬೇಕಾಗಿತ್ತು. ಹೊಸ ಕಾಯ್ದೆಯಲ್ಲಿ ಮಿತಿಯನ್ನು ರದ್ದುಪಡಿಸುವ ಸಾಧ್ಯತೆ ಇದೆ. ಮಕ್ಕಳ ಆದಾಯದ ಮೇಲೆ ಮಿತಿಯನ್ನು ನಿಗದಿಗೊಳಿಸುವ ಸಾಧ್ಯತೆ ಇದೆ. ಹೆಚ್ಚು ಆದಾಯ ಹೊಂದಿರುವ ಮಕ್ಕಳು, ಪೋಷಕರಿಗೆ ಹೆಚ್ಚು ನಿರ್ವಹಣಾ ವೆಚ್ಚ ನೀಡಬೇಕಾಗುತ್ತದೆ.
  • ಕಠ್ಮಂಡು : ‘ಭಾರತದ ಭದ್ರತೆಯ ವಿಚಾರದಲ್ಲಿ ನೇಪಾಳ ಅತ್ಯಂತ ಸೂಕ್ಷ್ಮವಾದ ಪ್ರದೇಶ. ಭಾರತದ ವಿರುದ್ಧ ನೇಪಾಳದ ನೆಲವನ್ನು ಬಳಸಿಕೊಳ್ಳಲು ನಾವು ಯಾರಿಗೂ ಅವಕಾಶ ಕೊಡುವುದಿಲ್ಲಎಂದು ನೇಪಾಳ ಪ್ರಧಾನಿ ಕೆ.ಪಿ. ಒಲಿ ಶರ್ಮಾ ಘೋಷಿಸಿದ್ದಾರೆ. ‘ಭಾರತನೇಪಾಳ ಗಡಿಯಲ್ಲಿ ಎರಡೂ ದೇಶಗಳ ಜನರ ಸಂಚಾರಕ್ಕೆ ಮುಕ್ತ ಅವಕಾಶವಿದೆ. ಅದು ದುರ್ಬಳಕೆ ಆಗದಂತೆ ನಾವು ಕಟ್ಟೆಚ್ಚರ ವಹಿಸಿದ್ದೇವೆ. ಆದರೂ ಕೆಲವು ಸಮಾಜಘಾತುಕ ಶಕ್ತಿಗಳು ಇದನ್ನು ದುರುಪಯೋಗ ಮಾಡಿಕೊಂಡಿವೆಎಂದು ಮೋದಿ ಶುಕ್ರವಾರ ಒಲಿ ಜತೆ ನಡೆಸಿದ ಸಭೆಯಲ್ಲಿ ಪ್ರಸ್ತಾಪಿಸಿದ್ದರು.
  • ನವದೆಹಲಿ : ‘ಹಿಂದುಗಳ ಪವಿತ್ರ ಕ್ಷೇತ್ರವಾಗಿರುವ ನೇಪಾಳದ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆಕೆ.ಪಿ.ಶರ್ಮಾ ಒಲಿ ಪ್ರಧಾನಿಯಾಗಿ ಆಯ್ಕೆ ಆದಾಗಲೇ ಮೋದಿ ಅವರ ನೇಪಾಳ ಭೇಟಿ ನಿಗದಿಯಾಗಿತ್ತು ಎಂದು ವಿಜಯ್ ಗೋಖಲೆ ಸ್ಪಷ್ಟನೆ ನೀಡಿದ್ದಾರೆ.
  • ಪಟ್ನಾಬಿಹಾರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿಯಾಗಿ ಆರ್ಜೆಡಿಯ ರಾಬ್ಡಿದೇವಿ ಅವರನ್ನು ಆಯ್ಕೆ ಮಾಡಲಾಗಿದೆ. ಮೇಲ್ಮನೆಯಲ್ಲಿ ಪಕ್ಷದ ಸಂಖ್ಯಾಬಲ ಹೆಚ್ಚಿದ ಕಾರಣ ಅವರಿಗೆ ಸ್ಥಾನ ದೊರೆತಿದೆ. ಇತ್ತೀಚೆಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ ಏಳರಿಂದ ಒಂಭತ್ತಕ್ಕೆ ಏರಿಕೆಯಾಗಿದೆ
  • ನವದೆಹಲಿ : ದೂರಸಂಪರ್ಕ ವಲಯದ ಸರಾಸರಿ ವರಮಾನವು 2017ರಲ್ಲಿ ಶೇ 8.56ಕ್ಕೆ ಇಳಿಕೆಯಾಗಿದ್ದು ₹ 2.55 ಲಕ್ಷ ಕೋಟಿಗೆ ತಲುಪಿದೆ. 2016ರಲ್ಲಿ ವರಮಾನ ₹ 2.79 ಲಕ್ಷ ಕೋಟಿ ಇತ್ತು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಮಾಹಿತಿ ನೀಡಿದೆ. ಪರವಾನಗಿ ಶುಲ್ಕ ಮತ್ತು ತರಂಗಾಂತರ ಬಳಕೆ ಶುಲ್ಕ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದ ವರಮಾನದಲ್ಲಿ ಇಳಿಕೆ ಕಂಡುಬಂದಿದೆ.
  • ಕ್ವಾಲಾಲಂಪುರ : ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಮಲೇಷ್ಯಾದ ಮಾಜಿ ಪ್ರಧಾನಿ ನಜಿಬ್ರಜಾಕ್ಹಾಗೂ ಅವರ ಪತ್ನಿ ದೇಶ ಬಿಟ್ಟು ತೆರಳದಂತೆ ಮಲೇಷ್ಯಾದ ನೂತನ ಪ್ರಧಾನಿ ಮಹತಿರ್ ಮೊಹಮ್ಮದ್ಆದೇಶ ಹೊರಡಿಸಿದ್ದಾರೆ.ತನಿಖೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಮುನ್ಸೂಚನೆ ಸಿಕ್ಕ ಬಳಿಕ ಸರ್ಕಾರ  ಕ್ರಮ ಕೈಗೊಂಡಿದೆ. ಇದರಿಂದ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ನಜಿಬ್ಕುಟುಂಬ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.
  • ಬಾಗ್ದಾದ್ : ಇರಾಕ್ಸಂಸತ್ಗೆ ಶನಿವಾರ ಸಾರ್ವತ್ರಿಕ ಚುನಾವಣೆ ನಡೆಯಿತುಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ವಿರುದ್ಧ ಗೆಲುವು ಘೋಷಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.329 ಸದಸ್ಯ ಬಲದ ಸಂಸತ್ತಿಗೆ 7 ಸಾವಿರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾರರ ಸಂಖ್ಯೆ ಸುಮಾರು 2.5 ಕೋಟಿ. ಪರಮಾಣು ಒಪ್ಪಂದದ ಕಾರಣದಿಂದ ಅಮೆರಿಕ ಹಾಗೂ ಇರಾನ್ ಮಧ್ಯೆ ಉಂಟಾಗಿರುವ ಬಿಕ್ಕಟ್ಟು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ
  • ಥಂಪಾ : ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಾಸಾ’, 2020ರಲ್ಲಿ ಮಂಗಳಗ್ರಹಕ್ಕೆ ಮೊದಲ ಹೆಲಿಕಾಪ್ಟರ್ಕಳುಹಿಸುವ ಯೋಜನೆ ರೂಪಿಸಿದೆ. ಹೆಲಿಕಾಪ್ಟರ್ಮಾನವರಹಿತವಾಗಿದ್ದು, ಡ್ರೋಣ್ಮಾದರಿಯಲ್ಲಿದೆ. ಮಂಗಳ ಗ್ರಹದ ಕುರಿತ ಮಾಹಿತಿಯನ್ನು ಮತ್ತಷ್ಟು ತಿಳಿದುಕೊಳ್ಳಲುನಾಸಾ ಯೋಜನೆ ಕೈಗೊಂಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಇದಕ್ಕೆದಿ ಮಾರ್ಸ್ ಹೆಲಿಕಾಪ್ಟರ್ಎಂದು ಹೆಸರಿಡಲಾಗಿದ್ದು, 1.8 ಕಿಲೋ ಗ್ರಾಂ ತೂಕ ಇದೆ. ಇದರ ಮುಖ್ಯ ಭಾಗವು ಒಂದು ಚೆಂಡಿನ ಗಾತ್ರದಲ್ಲಿ ಇರಲಿದೆ.
  • ನವದೆಹಲಿ : ಉದ್ದೀಪನಾ ಮದ್ದು ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಭಾರತ ಅಥ್ಲೆಟಿಕ್ಸ್ಫೆಡರೇಷನ್ (ಎಎಫ್) ‘ಸೂಜಿ ಮುಕ್ತ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ. ನಿಯಮದ ಪ್ರಕಾರ ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ತರಬೇತಿ ಕೇಂದ್ರಗಳಲ್ಲಿ ಅಥ್ಲೀಟ್ಗಳು ಯಾವುದೇ ಬಗೆಯ ಸಿರಿಂಜ್ಗಳನ್ನು ಬಳಸುವಂತಿಲ್ಲ. ಹೋದ ತಿಂಗಳು ನಡೆದಿದ್ದ ಕಾಮನ್ವೆಲ್ತ್ಕ್ರೀಡಾಕೂಟದ ವೇಳೆ ಭಾರತದ ಅಥ್ಲೀಟ್ಗಳು ತಂಗಿದ್ದ ಕ್ರೀಡಾಗ್ರಾಮದ ಕೊಠಡಿಯಲ್ಲಿ ಸಿರಿಂಜ್ಗಳು ಪತ್ತೆಯಾಗಿದ್ದವು. ಹೀಗಾಗಿ ಆಯೋಜಕರು 20 ಕಿಲೊಮೀಟರ್ಸ್ನಡಿಗೆ ಸ್ಪರ್ಧಿ ಕೆ.ಟಿ.ಇರ್ಫಾನ್ಮತ್ತು ಟ್ರಿಪಲ್ಜಂಪ್ ಸ್ಪರ್ಧಿ ರಾಕೇಶ್ಬಾಬು ಅವರಿಗೆ ಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಇದರಿಂದ ಭಾರತಕ್ಕೆ ಮುಖಭಂಗವಾಗಿತ್ತು.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...