Tuesday, May 8, 2018

ಮಂಗಳವಾರ ಮೇ 08-2018


  • ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 71.93ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾರಿಯೂ ಮೇಲುಗೈ ಸಾಧಿಸಿರುವ ಗ್ರಾಮೀಣ ವಿದ್ಯಾರ್ಥಿಗಳು (ಶೇ 74) ನಗರ ಪ್ರದೇಶ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ್ದಾರೆ. ಶೇ 67.87 ಇತ್ತು. ಅದಕ್ಕೆ ಹೋಲಿಸಿದರೆ ಬಾರಿ ಶೇ 4.01ರಷ್ಟು ಏರಿಕೆ ಕಂಡಿದೆ. ಖಾಸಗಿ ಶಾಲೆಗಳ ಶೇ 83.05ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರೆ, ಸರ್ಕಾರಿ ಶಾಲೆಗಳ ಶೇ 75.12 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಂ.ಟಿ. ರೇಜು ಮತ್ತು ಪ್ರೌಢಶಿಕ್ಷಣ ಇಲಾಖೆಯ ನಿರ್ದೇಶಕಿ ವಿ. ಸುಮಂಗಲಾ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದರು. ಬಾರಿಯೂ ಬಾಲಕಿಯರೇ ಮುನ್ನಡೆ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರ ಉತ್ತೀರ್ಣ ಪ್ರಮಾಣ ಶೇ 78.01ರಷ್ಟಿದೆ. ಇಬ್ಬರು ವಿದ್ಯಾರ್ಥಿಗಳು ತಲಾ 625 ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳು ತಲಾ 624 ಹಾಗೂ 12 ವಿದ್ಯಾರ್ಥಿಗಳು ತಲಾ 623 ಅಂಕಗಳನ್ನು ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಉಡುಪಿ ಜಿಲ್ಲೆ (ಶೇ 88.18) ಬಾರಿಯೂ ಮೊದಲ ಗಳಿಸಿದೆ. ಕಳೆದ ವರ್ಷ ಐದನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಎರಡನೇ ಸ್ಥಾನಕ್ಕೆ (ಶೇ 88.12) ಏರಿದೆ. ಚಿಕ್ಕೋಡಿ ಮೂರನೇ ಸ್ಥಾನ (87.01) ಉಳಿಸಿಕೊಂಡಿದೆ. 16ನೇ ಸ್ಥಾನದಲ್ಲಿದ್ದ ಯಾದಗಿರಿ ಬಾರಿ ಕೊನೆಯ ಸ್ಥಾನಕ್ಕೆ (ಶೇ 35.54) ಕುಸಿದಿದೆ.
  • ನವದೆಹಲಿ : ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ಪಂಜಾಬ್ ಪಠಾಣ್ಕೋಟ್ನ್ಯಾಯಾಲಯಕ್ಕೆ ವರ್ಗಾಯಿಸಿದ್ದು, ಸಿಬಿಐ ವಿಚಾರಣೆಗೆ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತುನಮ್ಮ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ವಕೀಲೆ ದೀಪಿಕಾ ಸಿಂಗ್ ರಾಜಾವತ್ಅವರಿಗೆ ಜೀವ ಬೆದರಿಕೆ ಇದೆಪ್ರಕರಣದ ವಿಚಾರಣೆಯನ್ನು ಕಠುವಾದಿಂದ ಚಂಡಿಗಡಕ್ಕೆ ವರ್ಗಾಯಿಸ
  • ಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಆರೋಪಿಗಳಲ್ಲಿ ಇಬ್ಬರು ಅರ್ಜಿ ಸಲ್ಲಿಸಿದ್ದರುಪ್ರಕರಣದ ವಿಚಾರಣೆಯನ್ನು ಚಿತ್ರೀಕರಣ ಮಾಡಬೇಕು, ವಿಳಂಬ ಮಾಡದೆ ನಿತ್ಯವೂ ವಿಚಾರಣೆ ನಡೆಸಿ, ತ್ವರಿತಗತಿಯಲ್ಲಿ ಮುಗಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯವಾಗುವರಣಬೀರ್ ದಂಡ ಸಂಹಿತೆಪ್ರಕಾರ ವಿಚಾರಣೆ ನಡೆಸಬೇಕು ಎಂದು ಅದು ನಿರ್ದೇಶಿಸಿದೆಜನವರಿ 10ರಂದು ಜಮ್ಮುವಿನ ಕಠುವಾ ಜಿಲ್ಲೆಯ ರಸಾನಾ ಗ್ರಾಮದ ಅಲೆಮಾರಿ ಜನಾಂಗಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಏಳು ದಿನಗಳ ಕಾಲ ಅತ್ಯಾಚಾರ ಎಸಗಲಾಗಿತ್ತು. ಬಳಿಕ ಆಕೆಯನ್ನು ಕೊಲೆ ಮಾಡಲಾಗಿತ್ತು. ಒಂದು ವಾರದ ಬಳಿಕ ಕಾಡಿನಲ್ಲಿ ಬಾಲಕಿಯ ಶವ ದೊರೆತಿತ್ತು. ಪ್ರಕರಣದ ತನಿಖೆ ಆರಂಭಿಸಿದ್ದ ರಾಜ್ಯ ಪೊಲೀಸ್ಇಲಾಖೆಯ ಅಪರಾದ ದಳ ಕಳೆದ ವಾರ ಕಠುವಾದ ನ್ಯಾಯಾಲಯಕ್ಕೆ ಏಳು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಬಾಲಾಪರಾಧಿ ವಿರುದ್ಧ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸಿತ್ತು. ಅದರಲ್ಲಿ ಬಾಲಕಿಯ ಅಪಹರಣ, ಆಕೆಗೆ ಮಾದಕವಸ್ತು ನೀಡಿರುವುದು ಮತ್ತು ದೇವಾಲಯದ ಒಳಗೆ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿದ ಕುರಿತು ವಿವರಗಳಿದ್ದವು.
  • ನವದೆಹಲಿ : ‘ತಮಿಳುನಾಡಿಗೆ ಕಾವೇರಿ ನೀರು ಹರಿಸುವಲ್ಲಿ ಅಸಡ್ಡೆ ತೋರಿಲ್ಲಎಂದು ಸುಪ್ರೀಂ ಕೋರ್ಟ್ಗೆ ಹೇಳಿಕೆ (ಅಫಿಡವಿಟ್‌) ನೀಡಿರುವ ರಾಜ್ಯ ಸರ್ಕಾರ, 2017–18ನೇ ಸಾಲಿನಲ್ಲಿ ಮಳೆಯ ಅಭಾವದ ನಡುವೆಯೂ ನಿಗದಿಗಿಂತ 16.66 ಟಿಎಂಸಿ ಅಡಿಯಷ್ಟು ನೀರನ್ನು ಹೆಚ್ಚುವರಿಯಾಗಿಯೇ ಹರಿಸಿದ್ದಾಗಿ ತಿಳಿಸಿದೆ. ಪ್ರಸಕ್ತ ಜಲವರ್ಷದಲ್ಲಿ ತಮಿಳುನಾಡಿಗೆ ಹರಿಸಿರುವ ನೀರಿನ ಪ್ರಮಾಣದ ವಿವರ ನೀಡುವಂತೆ ಕಳೆದ ಗುರುವಾರ ಸೂಚಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಸೋಮವಾರ ಹೇಳಿಕೆ ಸಲ್ಲಿಸಿದ್ದಾರೆ. ಮಳೆಯ ಕೊರತೆ ವರ್ಷದ ಮಾರ್ಚ್ಮತ್ತು ಏಪ್ರಿಲ್ತಿಂಗಳಿನಲ್ಲಿ ತಮಿಳುನಾಡಿಗೆ ಹರಿಯಬೇಕಿರುವ ನೀರಿನ ಪ್ರಮಾಣ ಕ್ರಮವಾಗಿ 1.24 ಟಿಎಂಸಿ ಅಡಿ ಹಾಗೂ 1.22 ಟಿಎಂಸಿ ಅಡಿ. ತಿಂಗಗಳುಗಳಲ್ಲಿ 1.40 ಟಿಎಂಸಿ ಅಡಿ ಹಾಗೂ 1.10 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
  • ಮುಂಬೈ  : ಡಾಲರ್ಗೆ ಹೆಚ್ಚಿದ ಬೇಡಿಕೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆ ಕಂಡಿರುವುದರಿಂದ ಸೋಮವಾರ ಡಾಲರ್ಎದುರಿನ ರೂಪಾಯಿ ವಿನಿಮಯ ಮೌಲ್ಯವು ₹ 67.13ಕ್ಕೆ ಕುಸಿತ ಕಂಡಿದೆ. ಇದು 15 ತಿಂಗಳ ಕನಿಷ್ಠ ಮಟ್ಟವಾಗಿದೆ. ತೈಲ ಆಮದು ಮಾಡಿಕೊಳ್ಳುವ ಕಂಪನಿಗಳು ಭಾರಿ ಪ್ರಮಾಣದಲ್ಲಿ ಡಾಲರ್ಖರೀದಿ ಮಾಡಿವೆ. ಇದರಿಂದ ರೂಪಾಯಿ ಮೌಲ್ಯ ಗಮನಾರ್ಹವಾಗಿ ಕುಸಿಯುವಂತಾಯಿತು ಎಂದು ಕರೆನ್ಸಿ ಮಾರಾಟಗಾರರು ಹೇಳಿದ್ದಾರೆ.
  • ಮಾಸ್ಕೊ : ರಷ್ಯಾದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ವ್ಲಾಡಿಮಿರ್ಪುಟಿನ್ಅವರು ಸೋಮವಾರ ಇಲ್ಲಿನ ಕ್ರೆಮ್ಲಿನ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸುಮಾರು ಎರಡು ದಶಕಗಳಿಂದ ಅಧ್ಯಕ್ಷರಾಗಿರುವ ಅವರು ಮುಂದಿನ ಆರು ವರ್ಷಗಳ ಅವಧಿಗೂ ಪುನರಾಯ್ಕೆಯಾಗಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಅವರುರಷ್ಯಾದ ವರ್ತಮಾನ ಮತ್ತು ಭವಿಷ್ಯಕ್ಕೆ ಏನು ಬೇಕೊ ಅದನ್ನು ಸಾಧಿಸಿಕೊಡುವುದು ನನ್ನ ಬದುಕಿನ ಗುರಿ ಮತ್ತು ಕರ್ತವ್ಯಎಂದು ಹೇಳಿದ್ದಾರೆ. ‘ನನ್ನ ಮೇಲಿರುವ ಗುರುತರವಾದ ಜವಾಬ್ದಾರಿಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ರಾಷ್ಟ್ರದ ಸಮೃದ್ಧಿ ಹಾಗೂ ಬಲವರ್ಧನೆಗಾಗಿ ಶ್ರಮಿಸುತ್ತೇನೆಎಂದಿದ್ದಾರೆ. 1999 ರಿಂದಲೂ ಅಧ್ಯಕ್ಷ ಸ್ಥಾನದಲ್ಲಿರುವ ಪುಟಿನ್ಅವರು ಮಾರ್ಚ್ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ76.7 ರಷ್ಟು ಮತಗಳನ್ನು ಪಡೆದು ಪುನರಾಯ್ಕೆಯಾಗಿದ್ದರು. ಪ್ರಧಾನಿಯಾಗಿ ಡಿಮಿಟ್ರಿ : ಪ್ರಧಾನಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಡಿಮಿಟ್ರಿ ಮೆಡ್ವಡೆವ್ಅವರನ್ನು ಪುನಃ ಪ್ರಧಾನಿಯಾಗಿ ಮುಂದುವರಿಸಬೇಕೆಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ಪುಟಿನ್ಸಂಸತ್ತಿನಲ್ಲಿ ಸೋಮವಾರ ಆಗ್ರಹಿಸಿದ್ದಾರೆ. 52 ವರ್ಷದ ಡಿಮಿಟ್ರಿ ಅವರು 2008ರಿಂದ 2012ರವರೆಗೆ ಅಧ್ಯಕ್ಷರಾಗಿದ್ದರು. 2012ರಲ್ಲಿ ಪುಟಿನ್ಅಧ್ಯಕ್ಷರಾಗಿದ್ದಾಗ ಡಿಮಿಟ್ರಿ ಪ್ರಧಾನಿಯಾಗಿದ್ದರು.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...