Wednesday, May 9, 2018

ಬುಧವಾರ ಮೇ 09-2018



  • ಲಂಡನ್‌ : ಭಾರತದ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಉದ್ಯಮಿ ವಿಜಯ್ಮಲ್ಯಗೆ ಭಾರಿ ಹಿನ್ನಡೆಯಾಗಿದೆ. ಭಾರತದ ಬ್ಯಾಂಕ್ಗಳು ಮಲ್ಯ ವಿರುದ್ಧ ದಾಖಲಿಸಿದ್ದ ₹10 ಸಾವಿರ ಕೋಟಿ ಸಾಲ ವಂಚನೆ ಪ್ರಕರಣದ ತೀರ್ಪು ಮಂಗಳವಾರ ಹೊರಬಿದ್ದಿದೆ. ಭಾರತದ 13 ಬ್ಯಾಂಕುಗಳ ಒಕ್ಕೂಟದ ವಾದವನ್ನು ಲಂಡನ್ನ್ಯಾಯಾಲಯ ಎತ್ತಿ ಹಿಡಿದಿದೆ. ಮಲ್ಯ ವಂಚನೆ ಪ್ರಕರಣದ ಸಂಬಂಧ ಭಾರತದ ನ್ಯಾಯಾಲಯ ನೀಡಿದ ಆದೇಶದ ಅನುಸಾರ ನಡೆದುಕೊಳ್ಳುವಂತೆ ನ್ಯಾಯಾಧೀಶ ಆ್ಯಂಡ್ರೂ ಹೆನ್ಶಾ ಅವರು ಬ್ಯಾಂಕ್ಗಳಿಗೆ ಸೂಚಿಸಿದ್ದಾರೆ.
  • ನವದೆಹಲಿ : ಕಾವೇರಿ ನೀರು ಹಂಚಿಕೆ ಕುರಿತ ಯೋಜನೆ (ಸ್ಕೀಂ) ಕರಡು ಸಲ್ಲಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಆರು ದಿನಗಳ ಗಡುವು ನೀಡಿ ಸುಪ್ರೀಂ ಕೋರ್ಟ್ಮಂಗಳವಾರ ಆದೇಶಿಸಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರಿಂದ 4 ಟಿಎಂಸಿ ಅಡಿ ಕಾವೇರಿ ನೀರು ಹರಿಸುವಂತೆ ಸೂಚಿಸಬೇಕು ಎಂಬ ತಮಿಳುನಾಡಿನ ಮನವಿಯನ್ನು ಕೋರ್ಟ್ಮಾನ್ಯ ಮಾಡದ್ದರಿಂದ ಕರ್ನಾಟಕ ನಿರಾಳವಾದಂತಾಗಿದೆ. ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು, ಮೇ 14ರಂದು ನಡೆಯಲಿರುವ ವಿಚಾರಣೆಯ ವೇಳೆ ಕೇಂದ್ರದ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯವರೇ ಖುದ್ದಾಗಿ ಹಾಜರಾಗಿ ಯೋಜನೆಯ ಕರಡು ಸಲ್ಲಿಸಬೇಕು ಎಂದು ಸೂಚಿಸಿತು.
  • ಬೆಂಗಳೂರು : ‘ರಾಜ್ಯ ವಿಧಾನಸಭೆಗೆ ಇದೇ 12ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಖಾಸಗಿ ಕಂಪನಿ, ಸಂಸ್ಥೆಗಳ ನೌಕರರು ಮತ್ತು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕುಎಂದು ಕಾರ್ಮಿಕ ಇಲಾಖೆ ಸೂಚಿಸಿದೆ. ‘ಕಾರ್ಮಿಕರಿಗೆ ಅಂದು ವೇತನ ಸಹಿತ ರಜೆ ನೀಡಬೇಕು. ಅವರ ಮೂಲಭೂತ ಹಕ್ಕು ಚಲಾಯಿಸಲು ಅನುವು ಮಾಡಿಕೊಡಬೇಕು. ನಿರಂತರ ಉತ್ಪಾದನೆಯಲ್ಲಿ ತೊಡಗುವುದು ಅನಿವಾರ್ಯ ಎಂದು ಕಂಡು ಬಂದಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಿಕೊಂಡು ಅಂತಹ ಉತ್ಪಾದನೆಗೆ ಸಂಬಂಧಪಟ್ಟ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಾಕಷ್ಟು ಕಾಲಾವಕಾಶ ಮಾಡಿಕೊಡಬೇಕುಎಂದು ಇಲಾಖೆ ತಿಳಿಸಿದೆ.
  • ಮುಂಬೈ : ಮರಾಠಿಯನ್ನು ಅಧಿಕೃತ ಸಂಪರ್ಕ ಭಾಷೆಯಾಗಿ ಬಳಸುವಂತೆ ಮಹಾರಾಷ್ಟ್ರ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರಿಗೆ ನಿರ್ದೇಶನ ನೀಡಿದೆ. ಸಂಬಂಧ ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗಿದೆ.
  • ನವದೆಹಲಿ : ಇಂಡಿಗೊ ವಿಮಾನಗಳಲ್ಲಿ ಸೊಳ್ಳೆ ಕಾಟದ ದೂರುಗಳು ಹೆಚ್ಚುತ್ತಿರುವುದರಿಂದ, ಎಲೆಕ್ಟ್ರಾನಿಕ್ಸೊಳ್ಳೆ ಬ್ಯಾಟ್ಗಳನ್ನು ಬಳಸಲು ವಿಮಾನಯಾನ ಸಂಸ್ಥೆ ಮುಂದಾಗಿದೆ. ‘ವಿಮಾನ ಟೇಕ್ಆಫ್ಗೂ ಮೊದಲು, ಅನುಮತಿ ಇರುವ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ ಮತ್ತು ಸೊಳ್ಳೆ ನಿವಾರಕ ಬಿಲ್ಲೆಗಳನ್ನು ಇರಿಸಲಾಗುತ್ತದೆ. ಆದರೆ ಅಸಾಧಾರಣ ಸನ್ನಿವೇಶಗಳಲ್ಲಿ ಮಾತ್ರ ಎಲೆಕ್ಟ್ರಾನಿಕ್ಸೊಳ್ಳೆ ಬ್ಯಾಟ್ಗಳನ್ನು ಬಳಸಲಾಗುವುದುಎಂದು ಸಂಸ್ಥೆ ಹೇಳಿದೆ
  • ಮಂಗಳೂರು : ಕರ್ಣಾಟಕ ಬ್ಯಾಂಕಿನ ಮುಖ್ಯ ನಿರ್ವಹಣಾ ಅಧಿಕಾರಿ (ಸಿಒಒ) ಆಗಿ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್ಎಂ. ಅವರನ್ನು ನೇಮಕ ಮಾಡಲಾಗಿದೆ. ಬ್ಯಾಂಕಿಂಗ್ಕ್ಷೇತ್ರದಲ್ಲಿ 37 ವರ್ಷಗಳ ಸೇವಾನುಭವ ಹೊಂದಿರುವ ಅವರು, ಉಡುಪಿ ಕಲ್ಯಾಣಪುರ ಮಿಲಾಗ್ರಿಸ್ಕಾಲೇಜಿನಿಂದ ಬಿಕಾಂ ಪದವಿ ಪಡೆದಿದ್ದಾರೆ.
  • ಬೀಜಿಂಗ್‌  : ಉತ್ತರ ಕೊರಿಯಾ ಅಧ್ಯಕ್ಷ ಕಿಮ್ಜಾಂಗ್ಉನ್ಮಂಗಳವಾರ ಚೀನಾಕ್ಕೆ ದಿಢೀರ್ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಷಿ ಜಿನ್ಪಿಂಗ್ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಕಿಮ್ಜಾಂಗ್ಅವರು  ಟ್ರಂಪ್ಅವರನ್ನು ಸಿಂಗಪುರದಲ್ಲಿ ಜೂನ್ತಿಂಗಳ ಮಧ್ಯ ಭಾಗದಲ್ಲಿ ಭೇಟಿಯಾಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಷಿ ಮತ್ತು ಕಿಮ್ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ. ದೇಶದ ಈಶಾನ್ಯ ಭಾಗದಲ್ಲಿರುವ ಬಂದರು ನಗರಿ ದಲಿಯಾನ್ನಲ್ಲಿ ಸೋಮವಾರ ಮತ್ತು ಮಂಗಳವಾರ ಇಬ್ಬರು ನಾಯಕರು ಪರಸ್ಪರ ಚರ್ಚೆ ನಡೆಸಿದರು. ‘ಎರಡು ದೇಶಗಳ ಅಧ್ಯಕ್ಷರ ನಡುವೆ ಸುಮಧುರ ಬಾಂಧವ್ಯ ಇದ್ದು, ಎರಡು ಜೂನ್ತಿಂಗಳ ಮಧ್ಯ ಭಾಗದಲ್ಲಿ ರಾಷ್ಟ್ರಗಳ ನಡುವಿನ ಬಾಂಧವ್ಯ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಿದರು.
  • ಲಂಡನ್‌ : ಅಮೋಘ ಆಟ ಆಡಿದ ವೇಲ್ಸ್ ಮಾರ್ಕ್ವಿಲಿಯಮ್ಸ್ಅವರು ವಿಶ್ವ ಸ್ನೂಕರ್ಚಾಂಪಿಯನ್ಷಿಪ್ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಸೋಮವಾರ ನಡೆದ ಸಿಂಗಲ್ಸ್ವಿಭಾಗದ ಫೈನಲ್ನಲ್ಲಿ ವಿಲಿಯಮ್ಸ್‌ 18–16 ಫ್ರೇಮ್ಗಳಿಂದ ಸ್ಕಾಟ್ಲೆಂಡ್ ಜಾನ್ಹಿಗ್ಗಿನ್ಸ್ಅವರನ್ನು ಸೋಲಿಸಿದರು.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...