Wednesday, May 9, 2018

ಗುರುವಾರ ಮೇ 10-2018



  • ನ್ಯೂಯಾರ್ಕ್ : ಫೋರ್ಬ್ಸ್ನಿಯತಕಾಲಿಕೆ ಬಿಡುಗಡೆ ಮಾಡಿದ 2018 ಹೆಚ್ಚು ಪ್ರಭಾವಶಾಲಿ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಸ್ಥಾನ ಗಳಿಸಿದ್ದಾರೆ. ಫೋರ್ಬ್ಸ್ಬಿಡುಗಡೆ ಮಾಡಿದ 75 ಜಾಗತಿಕ ಪ್ರಭಾವಶಾಲಿ ನಾಯಕ ಮತ್ತು ನಾಯಕಿಯರ ಪಟ್ಟಿಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಪುಟಿನ್ ಅವರು ಸತತ ನಾಲ್ಕು ವರ್ಷಗಳಿಂದ ಮೊದಲ ಸ್ಥಾನ ಕಾಯ್ದುಕೊಂಡಿದ್ದರುನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್‌, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಇದ್ದಾರೆ. ಭಾರತ ಮೂಲದ ಸತ್ಯ ನಾದೆಲ್ಲ 40ನೇ ಸ್ಥಾನ ಗಳಿಸಿದ್ದಾರೆಝಕರ್ಬರ್ಗ್ಅವರು 13ನೇ ಸ್ಥಾನ ಪಡೆದಿದ್ದರೆ, ಬ್ರಿಟನ್ಪ್ರಧಾನಿ ತೆರೆಸಾ ಮೇ 14ನೇ ಸ್ಥಾನ ಪಡೆದಿದ್ದಾರೆ. ಆ್ಯಪಲ್ಸಿಇಒ ಟಿಮ್ಕುಕ್‌ 24ನೇ ಸ್ಥಾನದಲ್ಲಿದ್ದಾರೆ. ಮೋದಿ ಹೊರತಾಗಿ ಸ್ಥಾನ ಪಡೆದಿರುವ ಇನ್ನೊಬ್ಬ ಭಾರತೀಯ ರಿಲಯನ್ಸ್ಇಂಡಸ್ಟ್ರೀಸ್ಅಧ್ಯಕ್ಷ ಮುಕೇಶ್ಅಂಬಾನಿ. ಇವರು 32ನೇ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ.
  • ನವದೆಹಲಿ : ಬೆಂಗಳೂರಿನ ಕಾಮರ್ಸ್ಸಂಸ್ಥೆ ಫ್ಲಿಪ್ಕಾರ್ಟ್ನಲ್ಲಿನ ಶೇ 77ರಷ್ಟು ಪಾಲು ಬಂಡವಾಳವನ್ನು 
  • ₹ 1.07 ಲಕ್ಷ ಕೋಟಿಗೆ ಖರೀದಿಸಿರುವುದಾಗಿ ಅಮೆರಿಕದ ರಿಟೇಲ್ದೈತ್ಯ ಸಂಸ್ಥೆ ವಾಲ್ಮಾರ್ಟ್ಇಂಕ್ಪ್ರಕಟಿಸಿದೆ. ವಾಲ್ಮಾರ್ಟ್ಇದುವರೆಗೆ ಸ್ವಾಧೀನಪಡಿಸಿಕೊಂಡಿರುವ ವಹಿವಾಟಿನಲ್ಲಿಯೇ ಇದು ಅತಿ ದೊಡ್ಡದು. ಇದರಿಂದ ಭಾರತದ ಇಕಾಮರ್ಸ್ ಮಾರುಕಟ್ಟೆ ಪ್ರವೇಶಿಸಲು ಅದರ ಹಾದಿ ಸುಗಮವಾಗಲಿದೆ. ಒಪ್ಪಂದದ ಫಲವಾಗಿ ಜಪಾನಿನ ಸಾಫ್ಟ್ಬ್ಯಾಂಕ್ಕಾರ್ಪ್ಗ್ರೂಪ್ಫ್ಲಿಪ್ಕಾರ್ಟ್ನಿಂದ ಹೊರ ನಡೆಯಲಿದೆ. 11 ವರ್ಷಗಳಷ್ಟು ಹಳೆಯ ಫ್ಲಿಪ್ಕಾರ್ಟ್ ಒಟ್ಟಾರೆ ಮೌಲ್ಯವನ್ನು  ₹1.39 ಲಕ್ಷ ಕೋಟಿ ಎಂದು ನಿಗದಿಪಡಿಸಲಾಗಿದೆ.
  • ನವದೆಹಲಿ : ದ್ವಿಚಕ್ರ ವಾಹನ ಸವಾರರು ಧರಿಸುವ ಹೆಲ್ಮೆಟ್ಗಳು ಕಡ್ಡಾಯವಾಗಿ ಬಿಐಎಸ್‌ (ಭಾರತೀಯ ಪ್ರಮಾಣೀಕರಣ ಸಂಸ್ಥೆ) ಅನುಮೋದನೆ ಪಡೆದಿರಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ಗಡ್ಕರಿ ಹೇಳಿದ್ದಾರೆ. ಹೆಲ್ಮೆಟ್ಗಳಲ್ಲಿದ್ವಿಚಕ್ರ ವಾಹನಎಂಬುದನ್ನು ಅಕ್ಷರದಲ್ಲಿ ಅಥವಾ ಚಿತ್ರದಲ್ಲಿ ಬರೆದಿರಬೇಕು. ಹೆಲ್ಮೆಟ್ಗಳಿಗೆ ಸಂಬಂಧಿಸಿ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ಶಿಫಾರಸುಗಳಿಗೆ ಅನುಸಾರವಾಗಿಯೇ ಹೆಲ್ಮೆಟ್ಗಳನ್ನು ತಯಾರಿಸಬೇಕು ಎಂದು ತಿಳಿಸಿದ್ದಾರೆ. ಹೆಲ್ಮೆಟ್ಗಳ ತೂಕ ಈಗ 1.5 ಕಿ.ಗ್ರಾಂ. ಇದೆ. ಅದನ್ನು 300 ಗ್ರಾಂನಷ್ಟು ಕಡಿಮೆ ಮಾಡಬೇಕು ಎಂದೂ ಸಮಿತಿ ಸಲಹೆ ನೀಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ ಈಗ ವರದಿ ನೀಡಿದೆ. ಶಿಫಾರಸು ಜಾರಿಗೆ ಬಂದ ನಂತರ ಮಾನ್ಯತೆ ಇಲ್ಲದ ಹೆಲ್ಮೆಟ್ಧರಿಸಿದರೆ ಕ್ರಮ ಖಚಿತ ಎಂದು ಗಡ್ಕರಿ ತಿಳಿಸಿದ್ದಾರೆ.
  • ನವದೆಹಲಿಬ್ಯಾಟರಿ ಚಾಲಿತ ವಾಹನಗಳ (ವಾಹನ) ಬಳಕೆಗೆ ಉತ್ತೇಜನ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ, 16 ರಿಂದ 18 ವರ್ಷದವರಿಗೆ ಬ್ಯಾಟರಿ ಚಾಲಿತ ಸ್ಕೂಟರ್ಚಾಲನೆಗೆ ಅವಕಾಶ ಕೊಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ಗಡ್ಕರಿ ಹೇಳಿದ್ದಾರೆ.
  • ನವದೆಹಲಿ : ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಕುರಿತು ಚುನಾವಣಾ ಆಯೋಗ ಮತ್ತು ಕಾನೂನು ಆಯೋಗ ಮುಂದಿನ ವಾರ ಚರ್ಚೆ ನಡೆಸಲಿವೆ. ವಿಷಯದ ಕುರಿತು ಇದೇ 16ರಂದು ಚರ್ಚೆ ನಡೆಸಲು ಕಾನೂನು ಆಯೋಗದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್‌.ಚೌಹಾಣ್ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಚುನಾವಣಾ ಆಯೋಗ ಆಹ್ವಾನ ನೀಡಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಕಾನೂನು ಆಯೋಗ ಈಗಾಗಲೇ ಒಂದು ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ವರದಿ ಸಿದ್ಧಪಡಿಸುವ ಮುನ್ನ ಸಂವಿಧಾನ ತಜ್ಞರು, ರಾಜಕೀಯ ಪಕ್ಷಗಳ ನಾಯಕರ ಅಭಿಪ್ರಾಯಗಳನ್ನು ಪಡೆದಿದೆ. 2019ರಿಂದ ಏಕಕಾಲಕ್ಕೆ ಚುನಾವಣೆ ನಡೆಸುವುದನ್ನು ಆರಂಭಿಸಬಹುದು. ಬಳಿಕ 2024ರಲ್ಲಿ ಎರಡನೇ ಹಂತದಲ್ಲಿ ಇದೇ ವ್ಯವಸ್ಥೆಯನ್ನು ಮುಂದುವರಿಸಬಹುದು.
  • ವಾಷಿಂಗ್ಟನ್‌ : ಹಿಂದಿನ ಅಧ್ಯಕ್ಷ ಬರಾಕ್ಒಬಾಮ ಅವಧಿಯಲ್ಲಿ ಆಗಿದ್ದ ಇರಾನ್ಜೊತೆಗಿನ 2015 ಐತಿಹಾಸಿಕ ಪರಮಾಣು ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ರದ್ದುಗೊಳಿಸಿದ್ದಾರೆ. ಅಲ್ಲದೇ, ಇರಾನ್ಮೇಲೆ ಹೊಸತಾಗಿ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದಾರೆ.‘ಇರಾನ್ಪರಮಾಣು ಒಪ್ಪಂದವು ಹಲವು ನ್ಯೂನತೆಗಳನ್ನು ಹೊಂದಿತ್ತು. ಕಾರಣದಿಂದ ಅಮೆರಿಕವು ಒಪ್ಪಂದದಿಂದ ಹಿಂದೆ ಸರಿಯುತ್ತಿದೆ ಎಂದು ಘೋಷಣೆ ಮಾಡುತ್ತಿದ್ದೇನೆಎಂದು ಬುಧವಾರ ಟ್ರಂಪ್‌ 
  • ಪ್ರಕಟಿಸಿದ್ದಾರೆ.

No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...