Saturday, May 12, 2018

ಶುಕ್ರವಾರ ಮೇ 11-2018



  • ಬೆಂಗಳೂರು : ಅಮೆರಿಕದ ವಾಲ್ಮಾರ್ಟ್‌, ಕಾಮರ್ಸ್ದೈತ್ಯ ಸಂಸ್ಥೆ ಫ್ಲಿಪ್ಕಾರ್ಟ್ಅನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದದ ಫಲವಾಗಿ ಸಂಸ್ಥೆಯ ಅನೇಕ ನೌಕರರು ಲಕ್ಷಾಧಿಪತಿಗಳಾಗಲಿದ್ದಾರೆ. ಫ್ಲಿಪ್ಕಾರ್ಟ್ 200 ರಿಂದ 250 ಸಿಬ್ಬಂದಿ ತಮ್ಮಉದ್ಯೋಗಿಯ ಷೇರು ಮಾಲೀಕತ್ವ ಯೋಜನೆಯನ್ನು (ಇಎಸ್ಒಪಿ) ನಗದಾಗಿ ಪರಿವರ್ತಿಸಿಕೊಳ್ಳಲು ಸಂಸ್ಥೆ ಅನುಮತಿ ನೀಡಿದರೆ ಅವರಿಗೆ  ₹3,350 ಕೋಟಿಗಳಷ್ಟು ಲಾಭ ಆಗಲಿದೆ. ಸ್ವಾಧೀನ ಒಪ್ಪಂದದ ಒಟ್ಟಾರೆ ಮೌಲ್ಯ ₹1.39 ಲಕ್ಷ ಕೋಟಿಗಳಷ್ಟಿದೆ. ಕಾಮರ್ಸ್ವಲಯದಲ್ಲಿನ ಅತಿದೊಡ್ಡ ಒಪ್ಪಂದ ಇದಾಗಿದೆ. ಇದರಿಂದ ಫ್ಲಿಪ್ಕಾರ್ಟ್ ಸಿಬ್ಬಂದಿಯ ಸಂಪತ್ತೂ ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ
  • ಬೆಂಗಳೂರು : ‘ವೈದ್ಯಕೀಯ ಪದವಿ ಸೀಟು ಹಂಚಿಕೆಗೆ ಸಂಬಂಧಿಸಿದ ಸ್ನಾತಕೋತ್ತರ ವೈದ್ಯ ಶಿಕ್ಷಣ (ತಿದ್ದುಪಡಿ) ನಿಯಮ–2018 ಅನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಮತ್ತು ಪ್ರಕಾರ ಶೇ 50ರಷ್ಟು ಸೀಟುಗಳನ್ನು ನಮಗೆ ಬಿಟ್ಟುಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕುಎಂದು ಕೋರಿ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳು ಹೈಕೋರ್ಟ್ ಮೆಟ್ಟಿಲೇರಿವೆ. ಸಂಬಂಧ, ಕರ್ನಾಟಕದಲ್ಲಿನ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟದ ಅಧ್ಯಕ್ಷೆ ಡಿ..ಕಲ್ಪಜಾ, ಬೆಂಗಳೂರಿನ ರಾಜರಾಜೇಶ್ವರಿ ಮತ್ತು ವೈದೇಹಿ ವೈದ್ಯಕೀಯ ಕಾಲೇಜುಗಳು ಸಲ್ಲಿಸಿರುವ ರಿಟ್ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಏನಿದೆ? : ‘ಕೇಂದ್ರ ಸರ್ಕಾರವು 2018ರಲ್ಲಿ ಹೊರಡಿಸಿರುವ ಹೊಸ ನಿಯಮದಂತೆ ರಾಜ್ಯ ಸರ್ಕಾರ ಶೇ 50ರಷ್ಟು ಸೀಟುಗಳನ್ನು ಖಾಸಗಿ ವೈದ್ಯ ಕಾಲೇಜುಗಳಿಗೆ ಬಿಟ್ಟುಕೊಡಬೇಕು. ಉಳಿದ ಶೇ 50ರಷ್ಟು ಸೀಟುಗಳನ್ನು ನೀಟ್ ಪರೀಕ್ಷೆಯಲ್ಲಿ ಅರ್ಹತೆ ಅನುಸಾರ ಗಿಟ್ಟಿಸಿದವರಿಗೆ ಕೆಇಎ ಮೂಲಕ ಹಂಚಿಕೆ ಮಾಡಬೇಕು. ಆದರೆ ರಾಜ್ಯ ಸರ್ಕಾರ ಶೇ.25ರಷ್ಟು ಸೀಟುಗಳನ್ನು ಮಾತ್ರ ಖಾಸಗಿಯವರಿಗೆ ನೀಡುತ್ತಿದೆಎಂಬುದು ಅರ್ಜಿದಾರರ ಆಕ್ಷೇಪ.
  • ಕ್ವಾಲಾಲಂಪುರ : ಪಾಕತಾನ್ ಹರಪನ್ಮುಖ್ಯಸ್ಥ ಮಹತಿರ್ಮೊಹಮದ್(92) ಮಲೇಷ್ಯಾದ ಏಳನೇ ಪ್ರಧಾನ ಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು. ಮಹತಿರ್ಅವರು ವಿಶ್ವದ ಅತ್ಯಂತ ಹಿರಿಯ ಚುನಾಯಿತ ನಾಯಕನಾಗಿದ್ದಾರೆ. ಇಲ್ಲಿನ ರಾಷ್ಟ್ರೀಯ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಮಹತಿರ್ಅವರಿಗೆ ರಾಜ ಸುಲ್ತಾನ್ಮೊಹಮ್ಮದ್ಅವರು ಪ್ರಮಾಣವಚನ ಬೋಧಿಸಿದರು. ಸಂಸತ್ತಿನ 222 ಸ್ಥಾನಗಳ ಪೈಕಿ ಪ್ರತಿಪಕ್ಷ ಒಕ್ಕೂಟವು 113 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತ ಪಡೆದಿದೆ. ನಿರ್ಗಮಿತ ಪ್ರಧಾನಿ ನಜಿಬ್ರಝಾಕ್ನೇತೃತ್ವದ ಆಡಳಿತಾರೂಢ ಬಾರಿಸನ್ನೇಸನಲ್‌(ನ್ಯಾಷನಲ್ಫ್ರಂಟ್‌) ಒಕ್ಕೂಟವು 79 ಸ್ಥಾನ ಪಡೆದು ಹಿನ್ನಡೆ ಅನುಭವಿಸಿದೆಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ 60 ವರ್ಷಗಳ ಬಳಿಕ ನ್ಯಾಷನಲ್ ಫ್ರಂಟ್ಅಧಿಕಾರ ಕಳೆದುಕೊಂಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಸಂಸತ್ ಎಲ್ಲ 222 ಸ್ಥಾನಗಳು ಹಾಗೂ 505 ಪ್ರಾದೇಶಿಕ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು.
  • ಜಿನೀವಾ : ‘ಆಸ್ಟ್ರೇಲಿಯಾದ 104 ವರ್ಷದ ವಿಜ್ಞಾನಿಯೊಬ್ಬರು ಸ್ವಿಟ್ಜರ್ಲೆಂಡ್ಗೆ ತೆರಳಿ ಗುರುವಾರ ವೈದ್ಯರ ನೆರವನ್ನುಪಡೆದು ಆತ್ಮಹತ್ಯೆ ಮಾಡಿಕೊಂಡರುಎಂದು ಸ್ವಿಸ್ಫೌಂಡೇಶನ್ತಿಳಿಸಿದೆ. ಡೇವಿಡ್ಗೂಡಾಲ್ಮೃತ ವಿಜ್ಞಾನಿ. ‘ಕಾಯಿಲೆಯಿಂದೇನೂ ನಾನು ಬಳಲುತ್ತಿಲ್ಲ. ಆದರೆ ಜೀವನದ ಉತ್ತಮ ಗಳಿಗೆಗಳು ಮುಗಿದಿವೆ. ಕಾರಣದಿಂದಷ್ಟೆ ಜೀವನ ಕೊನೆಗೊಳಿಸಿಕೊಳ್ಳಲು ನಿರ್ಧರಿಸಿದ್ದೇನೆಎಂದು ಅವರು ಹೇಳಿದ್ದರು. ‘ಲೈಫ್ಸೈಕಲ್ಕ್ಲಿನಿಕ್ನಲ್ಲಿ ರಾಸಾಯನಿಕವೊಂದನ್ನು ಅವರ ದೇಹಕ್ಕೆ ಸೇರಿಸುವ ಮೂಲಕ ಯಾವುದೇ ವೇದನೆಯಿಲ್ಲದೇ ಅವರು ಸಾವನ್ನಪ್ಪು ವಂತೆ ಮಾಡಲಾಯಿತುಎಂದು ಎಕ್ಸಿಟ್ಇಂಟರ್ನ್ಯಾಷನಲ್ಸಂಸ್ಥೆಯ ಸಂಸ್ಥಾಪಕ ಫಿಲಿಪ್ನಿಟ್ಸ್ಚೆಕ್ತಿಳಿಸಿದರು. ಡೇವಿಡ್ಅವರು ಸ್ವಿಟ್ಜರ್ಲೆಂಡ್ಗೆ ಬರಲು ಸಂಸ್ಥೆ ನೆರವಾಗಿತ್ತು. ಆಸ್ಟ್ರೇಲಿಯಾದ ಕಾನೂನಿನಲ್ಲಿ ರೀತಿಯ ಸಾವಿಗೆ ಅವಕಾಶವಿಲ್ಲ. ವರ್ಷದ ಆರಂಭದಲ್ಲಿ ಡೇವಿಡ್ಆತ್ಮಹತ್ಯೆಗೆ ಯತ್ನಿಸಿ ವಿಫಲರಾದ ಬಳಿಕ ಸ್ವಿಸ್ಫೌಂಡೇಶನ್ ಸಂಪರ್ಕಕ್ಕೆ ಬಂದಿದ್ದರು.
  • ವಾಷಿಂಗ್ಟನ್‌ : ‘ನೊಬೆಲ್ಶಾಂತಿ ಪ್ರಶಸ್ತಿ ಪಡೆಯುವುದಕ್ಕೆ ನಾನು ಆಸಕ್ತಿ ಹೊಂದಿಲ್ಲ. ಆದರೆ ಜಗತ್ತನ್ನು ಗೆಲ್ಲಲು ನಾನು ಬಯಸುತ್ತೇನೆಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ಹೇಳಿದ್ದಾರೆ. ‘ನೀವು ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವುದಕ್ಕೆ ಅರ್ಹರೇ ?’ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅದಕ್ಕೆ ಅರ್ಹ ಎಂದು  ಪ್ರತಿಯೊಬ್ಬರೂ ಭಾವಿಸುತ್ತಾರೆ, ಆದರೆ, ನಾನು ಹಾಗೆ ಹೇಳಿಲ್ಲಎಂದರು .‘ಉತ್ತರ ಕೊರಿಯಾವು ಪರಮಾಣು ಪರೀಕ್ಷೆ ನಿಲ್ಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ ಟ್ರಂಪ್ಅವರು ನೊಬೆಲ್ಶಾಂತಿ ಪ್ರಶಸ್ತಿ ಪಡೆಯಲು ಅರ್ಹ ವ್ಯಕ್ತಿ' ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ತಿಳಿಸಿದ್ದರು.

No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...