Saturday, May 12, 2018

ಶುಕ್ರವಾರ ಮೇ 12-2018



  • ಧಾರವಾಡ : ಕನ್ನಡದ ಶ್ರೇಷ್ಠ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ತೀವ್ರ ಹೃದಯಾಘಾತ ದಿಂದ (79) ಇಲ್ಲಿನ ಕಲ್ಯಾಣ ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ರೋಣ ತಾಲ್ಲೂಕು ಅಬ್ಬಿಗೇರಿಯಲ್ಲಿ 1939ರಲ್ಲಿ ಜನಿಸಿದ ಗಿರಡ್ಡಿ ಅವರು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
  • ಜನಕಪುರ : ‘ನೇಪಾಳವಿಲ್ಲದೆ ಭಾರತ ಪರಿಪೂರ್ಣವಾಗುವುದೇ ಇಲ್ಲ. ಹೀಗಾಗಿ ನೆರೆಯ ದೇಶಗಳ ವಿಚಾರ ಬಂದಾಗ ಭಾರತವು ನೇಪಾಳಕ್ಕೆ ಆದ್ಯತೆ ನೀಡುತ್ತದೆಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರುಎರಡು ದಿನಗಳ ನೇಪಾಳ ಪ್ರವಾಸದಲ್ಲಿರುವ ಮೋದಿ, ಇಲ್ಲಿನ ಜಾನಕಿ ಮಂದಿರದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
  • ಜನಕಪುರ ಮತ್ತು ಭಾರತದ ಅಯೋಧ್ಯೆ ಮಧ್ಯೆ ನೇರ ಬಸ್ಸಂಪರ್ಕ ಸೇವೆಗೆ ಮೋದಿ ಮತ್ತು ನೇಪಾಳ ಪ್ರಧಾನಿ ಕೆ.ಪಿ.ಒಲಿ ಶರ್ಮಾ ಚಾಲನೆ ನೀಡಿದರು. ‘ನಾನು ಇಲ್ಲಿಗೆ ಪ್ರಧಾನಿಯಾಗಿ ಬಂದಿಲ್ಲ. ಒಬ್ಬ ಭಕ್ತನಾಗಿ ಬಂದಿದ್ದೇನೆ. ನೇಪಾಳವಿಲ್ಲದೆ ಭಾರತೀಯರ ನಂಬಿಕೆ, ಭಾರತದ ದೇವಾಲಯಗಳು, ನಮ್ಮ ರಾಮನೂ ಪರಿಪೂರ್ಣವಾಗುವುದಿಲ್ಲ. ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳ ತೀರ್ಥಯಾತ್ರೆಗೆಂದು ಭಾರತದಲ್ಲಿರಾಮಾಯಣವಲಯ ತೀರ್ಥಯಾತ್ರೆಯೋಜನೆ ರೂಪಿಸಲಾಗುತ್ತಿದೆ. ಜನಕಪುರಅಯೋಧ್ಯೆ ಬಸ್ ಸೇವೆಯನ್ನು ಅದರೊಂದಿಗೆ ಜೋಡಿಸುತ್ತೇವೆ. ಇದರಿಂದ ಉದ್ಯೋಗಾವಕಾಶವೂ ಹೆಚ್ಚುತ್ತದೆಎಂದು ಅವರು ಹೇಳಿದರು. ‘ಬಿಹಾರದ ರಕ್ಸಾಲ್ ಮತ್ತು ನೇಪಾಳ ರಾಜಧಾನಿ ಕಠ್ಮಂಡು ನಡುವೆ ರೈಲುಮಾರ್ಗ ಅಭಿವೃದ್ಧಿಗೆ ಈಗಾಗಲೇ ಯೋಜನೆ ಸಿದ್ಧಪಡಿಸಿದ್ದೇವೆ. ರಸ್ತೆ ಮತ್ತು ರೈಲು ಸಂಪರ್ಕದಿಂದ ಎರಡೂ ದೇಶಗಳ ಮಧ್ಯೆ ವಾಣಿಜ್ಯ ಚಟುವಟಿಕೆ ಹೆಚ್ಚುತ್ತದೆ. ನೇಪಾಳವು ಭಾರತದೊಂದಿಗೆ ಸಂಪ್ರದಾಯ, ವಾಣಿಜ್ಯ, ಪ್ರವಾಸ, ತಂತ್ರಜ್ಞಾನ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಸಹಕಾರ ನೀಡಿದರೆ ಎರಡೂ ದೇಶಗಳಿಗೆ ಲಾಭವಾಗುತ್ತದೆಎಂದು ಮೋದಿ ಅವರು ಹೇಳಿದರು.
  • ನವದೆಹಲಿ : ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ನೀಡುವ ಪ್ರಶಸ್ತಿ ವಿಜೇತ ಕಂಪನಿಗಳಲ್ಲಿ ಬೆಂಗಳೂರಿನ ಹಿಂದ್ಹೈ ವ್ಯಾಕ್ಯೂಮ್ಕಂಪನಿಯೂ ಸೇರಿದೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ವರೆಗೆ ಆಮದಿನ ಮೇಲೆ ಅವಲಂಬಿತವಾಗಿದ್ದ ವಿಶಿಷ್ಟ ಸಾಧನವೊಂದನ್ನು ಕಂಪನಿಯು ಪೂರೈಸುತ್ತಿದೆ.
  • ದೇಶದ ಎರಡನೇ ಅಣು ಪರೀಕ್ಷೆ ಪೋಖ್ರಾಣ್–2 ಅಥವಾ ಆಪರೇಷನ್ ಶಕ್ತಿ ನಡೆದು ಶುಕ್ರವಾರಕ್ಕೆ (ಮೇ 11) 20 ವರ್ಷ ತುಂಬಿದೆ. ಮೇ 11,13 ರಂದು ನಡೆದ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿದ್ದವುಭಾರತದ ಮಿಸೈಲ್ಮ್ಯಾನ್ ಎಂದೇ ಖ್ಯಾತರಾಗಿದ್ದ ಮಾಜಿ ರಾಷ್ಟ್ರಪತಿ .ಪಿ.ಜೆ.ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಆಪರೇಷನ್ ಶಕ್ತಿ ನಡೆದಿತ್ತು. ಪರೀಕ್ಷೆಯ ಸ್ಮರಣಾರ್ಥ ಮೇ 11 ಅನ್ನು ಭಾರತದ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
  • ಕ್ವಾಲಾಲಂಪುರ :  ಜೈಲಿನಲ್ಲಿರುವ ಪ್ರತಿಪಕ್ಷ ಮುಖಂಡ ಅನ್ವರ್ ಇಬ್ರಾಹಿಂ ಅವರಿಗೆ ಕ್ಷಮಾದಾನ ನೀಡಲು ಮಲೇಷ್ಯಾ ದೊರೆ ಒಪ್ಪಿಕೊಂಡಿದ್ದಾರೆ ಎಂದು ನೂತನ ಪ್ರಧಾನಿ ಮಹತಿರ್ ಮೊಹಮದ್ ತಿಳಿಸಿದ್ದಾರೆಚುನಾವಣೆಯಲ್ಲಿ ಪ್ರತಿಪಕ್ಷ ಜಯಭೇರಿ ಬಾರಿಸಿದ್ದು, ಅನ್ವರ್ ಅವರಿಗೆ ಪ್ರಧಾನಿ ಹುದ್ದೆಯನ್ನು ಹಸ್ತಾಂತರ ಮಾಡಲು ಮಹತಿರ್ ನಿರ್ಧರಿಸಿದ್ದಾರೆ. ಜಗತ್ತಿನ ಅತಿ ಹಿರಿಯ ಪ್ರಧಾನಿಯಾಗಿ ಮಹತಿರ್ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದರು
  • ನವದೆಹಲಿ : ಫೋರ್ಟಿಸ್ಆಡಳಿತ ಮಂಡಳಿಯು ಮುಂಜಾಲ್‌–ಬರ್ಮನ್ಸಂಸ್ಥೆಗಳ ಜಂಟಿ ಹೂಡಿಕೆ ಪ್ರಸ್ತಾವವನ್ನು ಒಪ್ಪಿಕೊಂಡಿದೆ.18 ತಿಂಗಳಿನಿಂದ ಸಂಸ್ಥೆಯ ಷೇರು ಖರೀದಿಗೆ ಮೂಡಿದ್ದ ಪೈಪೋಟಿ ಅಂತ್ಯವಾಗಿದೆ. ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಲಹಾ ಸಮಿತಿ ನೀಡಿದ ಶಿಫಾರಸುಗಳನ್ನು ಪರಿಶೀಲನೆ ನಡೆಸಿದ ಬಳಿಕ ಆಡಳಿತ ಮಂಡಳಿಯು ಅಂತಿಮ ನಿರ್ಧಾರ ತೆಗೆದುಕೊಂಡಿದೆ.
  • ನೈ ಪೆ ತಾವ್ : ಭೂಗಡಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಹಾಗೂ ಮ್ಯಾನ್ಮಾರ್ ಶುಕ್ರವಾರ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಗುರುವಾರ ಇಲ್ಲಿಗೆ ಬಂದಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿ ಕುರಿತು ಮ್ಯಾನ್ಮಾರ್ ನಾಯಕರ ಜೊತೆ ಚರ್ಚೆ ನಡೆಸಿದರು. ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಮೈತ್ರಿಯನ್ನು ಬಲಗೊಳಿಸುವ ಮಾರ್ಗೋಪಾಯಗಳನ್ನು ಸರ್ಕಾರದ ಕೌನ್ಸೆಲರ್ಆಂಗ್ ಸಾನ್ ಸೂಕಿ ಅವರ ಜೊತೆ ಚರ್ಚಿಸಲಾಯಿತು.
  • ಇಸ್ಲಾಮಾಬಾದ್‌ : ಅಮೆರಿಕ ರಾಜತಾಂತ್ರಿಕರು ತಮ್ಮ ರಾಜತಾಂತ್ರಿಕ ಕಚೇರಿಯ 40 ಕಿ.ಮೀ ವ್ಯಾಪ್ತಿಯ ಆಚೆ ಸಂಚರಿಸದಂತೆ ಪಾಕಿಸ್ತಾನ ನಿರ್ಬಂಧ ಹೇರಿದೆ. ಶುಕ್ರವಾರದಿಂದ ಇದು ಜಾರಿಗೆ ಬಂದಿದೆ. ಪಾಕ್ರಾಜತಾಂತ್ರಿಕರ ಓಡಾಟಕ್ಕೆ ಅಮೆರಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಪಾಕ್ಪ್ರತೀಕಾರವಾಗಿ ಕ್ರಮ ಕೈಕೊಂಡಿದೆ


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...