Monday, May 7, 2018

ಶನಿವಾರ ಮೇ 05-2018



  • ನವದೆಹಲಿ : ಗಲ್ಲು ಶಿಕ್ಷೆನ್ಯಾಯದ ಹೆಸರಿನಲ್ಲಿ ನಡೆಯುವ ಅಮಾನವೀಯ ಹತ್ಯೆಎಂದು ನಿರ್ಭಯಾ ಅತ್ಯಾಚಾರಿಗಳು ಸುಪ್ರೀಂ ಕೋರ್ಟ್ನಲ್ಲಿ ಶುಕ್ರವಾರ ಪ್ರತಿಪಾದಿಸಿದ್ದಾರೆ. ಆರು ವರ್ಷಗಳ ಹಿಂದೆ(2012) ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಗರಿಷ್ಠ ಶಿಕ್ಷೆಯಿಂದ ತಮ್ಮನ್ನು ರಕ್ಷಿಸುವಂತೆ ಕೋರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ಮಿಶ್ರಾ ನೇತೃ
  • ತ್ವದ ಪೀಠವು ತೀರ್ಪು ಕಾಯ್ದಿರಿಸಿದೆ. ಮಂಗಳವಾರದೊಳಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ವಾದಿ ಮತ್ತು ಪ್ರತಿವಾದಿ ವಕೀಲರಿಗೆ ಸೂಚಿಸಿದೆ.
  • ನವದೆಹಲಿ : ಚರ್ಮಕ್ಕೆ ಹಚ್ಚುವ ಸ್ಟಿರಾಯ್ಡ್ಇರುವ ಕ್ರೀಮ್ಅಥವಾ ಮುಲಾಮುಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿಷೇಧಿಸಿದೆ. ಚರ್ಮರೋಗ ತಜ್ಞ ವೈದ್ಯರ ಮನವಿಯಂತೆ ಕ್ರಮ ಕೈಗೊಳ್ಳಲಾಗಿದೆ. ನವೆಂಬರ್‌ 1ರಿಂದ ಇದು ಜಾರಿಗೆ ಬರಲಿದೆ
  • ನವದೆಹಲಿ : ಮೇ 1 ರಿಂದಲೇ ಅನ್ವಯಿಸುವಂತೆ 28 ಔಷಧಗಳ ಮೇಲಿನ ಆಮದು ಸುಂಕ ಕೈಬಿಟ್ಟಿರುವುದಾಗಿ ಚೀನಾ ಹೇಳಿದೆ. ಇದು ಭಾರತದ ಔಷಧ ಉದ್ಯಮಕ್ಕೆ ಉತ್ತೇಜಕರ ಸುದ್ದಿಯಾಗಿದ್ದು, ಔಷಧ ರಫ್ತು ಮಾಡಲು ಅನುಕೂಲವಾಗಲಿದೆ. ‘ಚೀನಾದ ನಿರ್ಧಾರದಿಂದ ಭವಿಷ್ಯದಲ್ಲಿ ಉಭಯ ದೇಶಗಳ ಮಧ್ಯೆ ಮೂಡಿರುವ ವ್ಯಾಪಾರ ಅಸಮತೋಲನ ಕಡಿಮೆಯಾಗಲಿದೆಎಂದು ಭಾರತದಲ್ಲಿನ ಚೀನಾ ರಾಯಭಾರಿ ಲಿಯು ಯೌಫಾ ಅವರು ಟ್ವೀಟ್ಮಾಡಿದ್ದಾರೆ.
  • ಸ್ಟಾಕ್ಹೋಮ್‌ : ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸ್ವೀಡನ್ನಿನ ಹಿರಿಯ ಸಾಹಿತಿ ಜೀನ್ ಕ್ಲಾಡ್ ಅರ್ನಾಲ್ಟ್ನೊಬೆಲ್ಪ್ರಶಸ್ತಿ ಆಯ್ಕೆ ಸಮಿತಿ ಜತೆಗೆ ನಿಕಟ ಸಂಬಂಧ ಹೊಂದಿರುವ ವಿಷಯ ಗಂಭೀರ ಸ್ವರೂಪ ಪಡೆದಿದ್ದು, ಮುಜುಗರಕ್ಕೆ ಒಳಗಾಗಿರುವ ಸ್ವೀಡಿಷ್ ಅಕಾಡೆಮಿ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಿಸುವುದಿಲ್ಲ ಎಂದು ತಿಳಿಸಿದೆ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಸಲ ವರ್ಷದ ನೊಬೆಲ್ಸಾಹಿತ್ಯ ಪ್ರಶಸ್ತಿ ಘೋಷಿಸುತ್ತಿಲ್ಲ. ಆದರೆ ಇತರ ವಿಷಯಗಳಿಗೆ ಮೊದಲಿನಂತೆಯೇ ಪ್ರಶಸ್ತಿ ಘೋಷಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ. ವಿವಿಧ ವಿಷಯಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುವ ಅಕಾಡೆಮಿ, ಜಾಗತಿಕ ಯುದ್ಧ ಮತ್ತು ಇತರ ಕಾರಣಗಳಿಗಾಗಿ ಒಟ್ಟು ಏಳು ಸಲ (1915, 1919, 1925, 1926, 1927, 1936 ಮತ್ತು 1949) ಪ್ರಶಸ್ತಿ ಘೋಷಣೆ ತಡೆಹಿಡಿದಿತ್ತು
  •  


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...