Monday, May 7, 2018

ಗುರುವಾರ ಮೇ 03-2018




ಬೆಂಗಳೂರು : ಚುನಾವಣಾ ಕರ್ತವ್ಯಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುವ ಸರ್ಕಾರಿ ನೌಕರರನ್ನು ಬಂಧಿಸಿ ಕ್ರಮತೆಗೆದುಕೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ ಬೆಂಗಳೂರು ನಗರವೊಂದರಲ್ಲೇ ಸುಮಾರು 1,500. ಇವರೆಲ್ಲರಿಗೂ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಇತರ ಜಿಲ್ಲೆಗಳಲ್ಲಿ ಸಮಸ್ಯೆ ಅಷ್ಟಾಗಿ ಇಲ್ಲಚುನಾವಣಾ ಆಯೋಗದ ನಿಯಮಾವಳಿ ಸೆಕ್ಷನ್‌ 134 ಪ್ರಕಾರ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳುವುದು ಅಪರಾಧ. ಚುನಾವಣಾ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಬೇಕು ಎಂದು ಸಂಜೀವ್ಕುಮಾರ್ ಹೇಳಿದರು. ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5.69 ಕೋಟಿಗೆ ಏರಿಕೆ ಆಗಿದೆ ಎಂದರು. ಮಹಿಳಾ ಮತದಾರರ ನೋಂದಣಿ ಪ್ರಮಾಣ ಶೇ 16 ರಷ್ಟು ಹೆಚ್ಚಾಗಿದೆ. ಪುರುಷ ಮತ್ತು ಮಹಿಳಾ ಮತದಾರರ ಅನುಪಾತ 1000 ಕ್ಕೆ 974 ಇದೆ. 2013 ರಲ್ಲಿ ಪ್ರಮಾಣ 952 ಇತ್ತು. ಬಾರಿ 15.44 ಲಕ್ಷ ಯುವ ಮತದಾರರು ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
ನವದೆಹಲಿ : 2-ಜಿ ತರಂಗಾಂತರ ಹಂಚಿಕೆ ಹಗರಣದ ಏರ್ಸೆಲ್‌–ಮ್ಯಾಕ್ಸಿಸ್ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಎರಡು ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರನ್ನು ಜುಲೈ 10 ವರೆಗೆ ಬಂಧಿಸದಂತೆ ದೆಹಲಿ ಹೈಕೋರ್ಟ್ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮುಂಬೈ : ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೇ ಹತ್ಯೆ ನಡೆದು ಏಳು ವರ್ಷಗಳ ನಂತರ ಭೂಗತ ಪಾತಕಿ ರಾಜೇಂದ್ರ ನಿಕಾಲ್ಜೆ ಅಲಿಯಾಸ್ಚೋಟಾ ರಾಜನ್ಹಾಗೂ ಆತನ ಎಂಟು ಸಹಚರರಿಗೆ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆತೀರ್ಪು ಪ್ರಕಟಿಸಿದ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಮೊಕಾ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಮೀರ್ಅಡ್ಕರ್‌, ಎಲ್ಲ ಅಪರಾಧಿಗಳಿಗೂ ತಲಾ ₹26 ಲಕ್ಷ ದಂಡ ವಿಧಿಸಿದ್ದಾರೆ.
ನವದೆಹಲಿ : ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ಅವರಿಗೆ ಸುಪ್ರೀಂ ಕೋರ್ಟ್ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ಪಷ್ಟ ನಿರ್ಧಾರಕ್ಕೆ ಬರಲು ಕೊಲಿಜಿಯಂ ವಿಫಲವಾಗಿದೆ. ಜೋಸೆಫ್ಅವರಿಗೆ ಬಡ್ತಿ ನೀಡುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಮರು ಪರಿಶೀಲನೆಗೆ ವಾಪಸ್ಕಳುಹಿಸಿತ್ತು.
ನವದೆಹಲಿ : ಅರವತ್ತು ವರ್ಷ ಮೀರಿದ ಹಿರಿಯ ನಾಗರಿಕರಿಗಾಗಿ ರೂಪಿಸಿರುವಪ್ರಧಾನಮಂತ್ರಿ ವಯ ವಂದನಾ ಯೋಜನೆಯಲ್ಲಿನ (ಪಿಎಂವಿವಿವೈ) ಹೂಡಿಕೆ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದ್ದು, ಯೋಜನೆ ಸೇರ್ಪಡೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಯೋಜನೆಯಲ್ಲಿ ಹಿರಿಯ ನಾಗರಿಕರು ತೊಡಗಿಸಬಹುದಾದ ಹೂಡಿಕೆ ಮಿತಿಯನ್ನು ಈಗ ₹7.5 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಿಸಲಾಗಿದೆ. 2017 ಮೇ 4 ರಿಂದ 2018 ಮೇ 3ರವರೆಗೆ ಇದರ ಸದಸ್ಯತ್ವ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದೇ 3ರಂದು ಕೊನೆಗೊಳ್ಳಲಿದ್ದ ಯೋಜನೆಗೆ ಸೇರ್ಪಡೆಗೊಳ್ಳುವ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲಾಗಿದೆ. 2020 ಮಾರ್ಚ್‌ 31ರವರೆಗೆ ಯೋಜನೆ ಸದಸ್ಯತ್ವ ಪಡೆದುಕೊಳ್ಳಬಹುದು.
ನವದೆಹಲಿ : 2022 ವೇಳೆಗೆ ಎಲ್ಲರಿಗೂ 50 ಎಂಬಿಪಿಎಸ್ವೇಗದ ಬ್ರಾಡ್ಬ್ಯಾಂಡ್ಸೇವೆ, ‘5ಜಿಸೌಲಭ್ಯ ಮತ್ತು 40 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಹೊಸ ದೂರ ಸಂಪರ್ಕ ಕರಡು ನೀತಿಯಲ್ಲಿ ಗುರಿ ನಿಗದಿಪಡಿಸಲಾಗಿದೆ.
₹ 7.8 ಲಕ್ಷ ಕೋಟಿಗಳಷ್ಟು ಸಾಲದ ಸುಳಿಗೆ ಸಿಲುಕಿರುವ ದೂರಸಂಪರ್ಕ ಕ್ಷೇತ್ರದ ಪುನಶ್ಚೇತನ ಉದ್ದೇಶದ, ‘ರಾಷ್ಟ್ರೀಯ ಡಿಜಿಟಲ್ಸಂವಹನ ನೀತಿ 2018’ಯನ್ನು ಕೇಂದ್ರ ಸರ್ಕಾರವು ಅನಾವರಣಗೊಳಿಸಿದೆ.
ದುಬೈ : ಇಂಗ್ಲೆಂಡ್ ಕ್ರಿಕೆಟ್ ತಂಡವು ಐಸಿಸಿಯ ಏಕದಿನ ್ಯಾಂಕಿಂಗ್ನಲ್ಲಿ ಅಗ್ರಪಟ್ಟಕ್ಕೇರಿದೆ. ಇತ್ತೀಚೆಗೆ ಉತ್ತಮ ಸಾಮರ್ಥ್ಯ ತೋರುವ ಮೂಲಕ ಎಂಟು ಪಾಯಿಂಟ್ಗಳನ್ನು ಕಲೆ ಹಾಕಿರುವ ತಂಡ ಭಾರತವನ್ನು ಮೂರು ಪಾಯಿಂಟ್ಗಳಿಂದ ಹಿಂದಿಕ್ಕಿದೆ. ಈ ತಂಡದ ಬಗಲಲ್ಲಿ ಈಗ 125 ಪಾಯಿಂಟ್ಗಳು ಇವೆ. ಆಸ್ಟ್ರೇಲಿಯಾ ವಿರುದ್ಧ ಜನವರಿಯಲ್ಲಿ ನಡೆದ ಸರಣಿಯಲ್ಲಿ 4–1ರಿಂದ ಮತ್ತು ನ್ಯೂಜಿಲೆಂಡ್ವಿರುದ್ಧ ಮಾರ್ಚ್ನಲ್ಲಿ ನಡೆದ ಸರಣಿಯಲ್ಲಿ 3–2ರಿಂದ ಇಂಗ್ಲೆಂಡ್ ಗೆದ್ದಿತ್ತು. 2013 ನಂತರ ಇದೇ 
ಮೊದಲ ಬಾರಿ ತಂಡ ಅಗ್ರ ಸ್ಥಾನಕ್ಕೆ ಏರಿದ ಸಾಧನೆ ಮಾಡಿದೆ.

ನಖೋನ್ರಚಸಿಮಾ, ಥಾಯ್ಲೆಂಡ್‌ : 50ನೇ ಪ್ರಶಸ್ತಿ ಗೆಲ್ಲುವ ಮೂಲಕ ಥಾಯ್ಲೆಂಡ್ ಬಾಕ್ಸರ್ವಾನ್ಹೆಂಗ್ ಮೆನಯೊಥಿನ್ಅವರು ಫ್ಲಾಯ್ಡ್ ಮೇವೆದರ್ ದಾಖಲೆಯನ್ನು ಸರಿಗಟ್ಟಿದರು. ಇಲ್ಲಿ ಬುಧವಾರ ನಡೆದ ಡಬ್ಲ್ಯುಬಿಸಿ ಚಾಂಪಿಯನ್ಷಿಪ್ನಲ್ಲಿ ಲೆರಾಯ್ ಎಸ್ಟ್ರಡಾ ಅವರನ್ನು ಮಣಿಸುವ ಮೂಲಕ ಅವರು ಸಾಧನೆ ಮಾಡಿದರು.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...