Sunday, May 6, 2018

ಮಂಗಳವಾರ ಮೇ 02-2018



ನವದೆಹಲಿ : ಪೋಕ್ಸೊ (ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿನ ಪ್ರಕರಣಗಳ ವಿಚಾರಣೆಯನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸುವಂತೆ ಹೈಕೋರ್ಟ್ಗಳಿಗೆ ಸುಪ್ರೀಂ ಕೋರ್ಟ್ನಿರ್ದೇಶನ ನೀಡಿದೆ

ನವದೆಹಲಿ : ಎಲ್ಲವೂ ನಿರೀಕ್ಷೆಯಂತೆ ನಡೆದರೆ ಆಗಸದಲ್ಲಿ ಹಾರುತ್ತಿರುವ ವಿಮಾನದಿಂದಲೇ ಪ್ರಯಾಣಿಕರು ಮೊಬೈಲ್ಕರೆ ಮಾಡುವ ಸೌಲಭ್ಯವನ್ನು ಶೀಘ್ರವೇ ಪಡೆಯಬಹುದು. ಜೊತೆಗೆ ಅಂತರ್ಜಾಲ ಬಳಕೆ ಮಾಡಬಹುದು. ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಮೊಬೈಲ್ಕರೆ ಮತ್ತು ಅಂತರ್ಜಾಲ ಸೇವೆ ನೀಡುವ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರ ಮಂಗಳವಾರ ಒಪ್ಪಿಗೆ ಸೂಚಿಸಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಪ್ರಯಾಣಿಕರಿಗೆ ಸೇವೆ ದೊರೆಯಲಿದೆ. ಟ್ರಾಯ್ಎಲ್ಲ ಪ್ರಸ್ತಾಪಕ್ಕೂ ಒಪ್ಪಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಿಟ್ಟ ಬೇಡಿಕೆಗೆ ದೂರಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್ನೇತೃತ್ವದ ದೂರಸಂಪರ್ಕ ಆಯೋಗ ಷರತ್ತುಬದ್ಧ ಒಪ್ಪಿಗೆ ನೀಡಿದೆ

ನವದೆಹಲಿ : ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಇದು 2014 ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಕೊಟ್ಟ ಅತ್ಯಂತ ದೊಡ್ಡ ಭರವಸೆಯಾಗಿತ್ತು. ಅದು ಈಗ ಈಡೇರಿದೆ ಎಂದು ಅವರು ಟ್ವೀಟ್ಮಾಡಿದ್ದಾರೆ

ನವದೆಹಲಿ : ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿ ನೀಡಿದ್ದ ನಿರ್ದೇಶನಗಳ ಜಾರಿಗೆ ಸಮಯ ನಿಗದಿ ಮಾಡಲು ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು ಸುಪ್ರೀಂ ಕೋರ್ಟನ್ನು ಕೆರಳಿಸಿದೆ. ‘ಇದು ಅತಿಯಾಯಿತು. ಇದು ಬಡವರ ಶೋಷಣೆಎಂದು ನ್ಯಾಯಮೂರ್ತಿಗಳಾದ ಮದನ್ಬಿ. ಲೋಕೂರ್ಮತ್ತು ದೀಪಕ್ಮಿಶ್ರಾ ಅವರ ಪೀಠ ಹೇಳಿದೆ. ದೇಶದ ಬಡ ಜನರ ಬಗ್ಗೆ ಭಾರತ ಸರ್ಕಾರದ ಧೋರಣೆ ಇದುವೇ ಎಂದು ಪೀಠ ಪ್ರಶ್ನಿಸಿತು.ಗಡುವು ನಿಗದಿ ಮಾಡಲು ನೀವು ಸಮಿತಿಯೊಂದನ್ನು ರಚಿಸಿದ್ದೀರಿ. ಇಲ್ಲಿ ಏನು ನಡೆಯುತ್ತಿದೆ? ₹20 ಸಾವಿರದಿಂದ ₹25 ಸಾವಿರ ಕೋಟಿಯನ್ನು ಇಟ್ಟುಕೊಂಡು ಕೂತಿದ್ದೀರಿ. ಬಡವರ ಬಗೆಗಿನ ಸರ್ಕಾರದ ನಿಲುವು ಇದೇನಾಎಂದು ಪೀಠ ಕಟುವಾಗಿ ಪ್ರಶ್ನಿಸಿತು

ನವದೆಹಲಿ : ಯುನೆಸ್ಕೊ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿರುವ ವಿಶ್ವಪ್ರಸಿದ್ಧ ತಾಜ್ಮಹಲ್ ಬಣ್ಣ ಬದಲಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಚ್ಚಬಿಳುಪಿನ ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ತಾಜ್ಬಣ್ಣ ಮೊದಲಿಗೆ ಹಳದಿ ಬಣ್ಣಕ್ಕೆ ತಿರುಗಿತ್ತು. ನಂತರ ಕಂದು ಬಣ್ಣ ಹಾಗೂ ಈಗ ಹಸಿರು ಬಣ್ಣವಾಗುತ್ತಿದೆ ಎಂದಿರುವ ಸುಪ್ರೀಂ, ‘ದೇಶ ಮತ್ತು ವಿದೇಶಗಳ ತಜ್ಞರನ್ನು ಸಂಪರ್ಕಿಸಿ ತಾಜ್ಗೆ ಉಂಟಾಗಿರುವ ಹಾನಿ ಕುರಿತು ಕೇಂದ್ರ ಸರ್ಕಾರ ತಿಳಿಯಬೇಕು. ನಂತರ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ
ನವದೆಹಲಿ : ಸೂಪರ್ಬೈಕ್ಗಳನ್ನು ತಯಾರಿಸುವ ಇಟಲಿಯ ಡುಕಾಟಿ ಸಂಸ್ಥೆಯು ಭಾರತದ ಮಾರುಕಟ್ಟೆಗೆ ಹೊಸ ಆವೃತ್ತಿಯ  ‘ಮಾನ್ಸ್ಟರ್‌ 821’ ಬಿಡುಗಡೆ ಮಾಡಿದೆ. ಬೈಕ್ ಎಕ್ಸ್ಷೋರೂಂ ಬೆಲೆ ₹ 9.51 ಲಕ್ಷದಿಂದ ಆರಂಭವಾಗುತ್ತದೆ. ಯುರೊ 4 ಮಾನದಂಡದ ಲಿಕ್ವಿಡ್ಕೂಲ್ಡ್ಎಂಜಿನ್‌ 109 ಎಚ್ಪಿ ಶಕ್ತಿ ಹೊಂದಿದೆ
ನವದೆಹಲಿ : ‘ವೇತನ ಸಂಹಿತೆ ಮಸೂದೆ 2017’ಯನ್ನು ಸಂಸತ್ತಿನ ಸ್ಥಾಯಿ ಸಮಿತಿಯು ಅಂತಿಮಗೊಳಿಸಿದ್ದು, ಸಂಸತ್ತಿನ ಮುಂಗಾರು ಅಧಿವೇಶ ನದಲ್ಲಿ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗಿ ಜಾರಿಗೆ ಬರುತ್ತಿದ್ದಂತೆ, ದೇಶದಾದ್ಯಂತ ವಿವಿಧ ವಲಯಗಳಿಗೆ ನಿರ್ದಿಷ್ಟ ಮಟ್ಟದ ಕನಿಷ್ಠ ವೇತನ ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಪ್ರಾಪ್ತವಾಗಲಿದೆ. ಕೇಂದ್ರವು ನಿಗದಿಪಡಿಸುವ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿ ಕನಿಷ್ಠ ವೇತನ ನಿಗದಿಪಡಿಸಲು ರಾಜ್ಯಗಳಿಗೆ ಅವಕಾಶ ಇರುವುದಿಲ್ಲ

ವಾಷಿಂಗ್ಟನ್‌ : ‘ಅಮೆರಿಕದಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಲಸೆ ಕಾನೂನುಗಳು ಅತ್ಯಂತ ಹಳತು ಮತ್ತು ದುರ್ಬಲವಾಗಿವೆಎಂದು ಅಧ್ಯಕ್ಷ ಡೊನಾಲ್ಡ್ಟ್ರಂಪ್ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಲಸೆ ಕಾನೂನುಗಳಲ್ಲಿನ ಲೋಪದೋಷಗಳಿಂದ ಭಯೋತ್ಪಾದಕರು, ಅಪರಾಧಿಗಳು, ಅಕ್ರಮ ಸಾಗಾಣಿಕೆದಾರರು ತಪ್ಪಿಸಿಕೊಳ್ಳುತ್ತಿದ್ದಾರೆ. ಈಗಿರುವ ವ್ಯವಸ್ಥೆಯಿಂದ ಅಕ್ರಮ ವಲಸೆಗಾರರಿಂದ ಉಂಟಾಗಿರುವ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಸದರ ಸಭೆ ಕರೆದಿದ್ದೇನೆಎಂದು ತಿಳಿಸಿದ್ದಾರೆ

ವಾಷಿಂಗ್ಟನ್‌ : ‘ಬಾಹ್ಯಾ ಕಾಶ ಕ್ಷೇತ್ರಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅಮೆರಿಕದ ಹೀರೊಎಂದು ಅಧ್ಯಕ್ಷ ಡೊನಾಲ್ಡ್ಟ್ರಂಪ್ಬಣ್ಣಿಸಿದ್ದಾರೆ. ಮೇ ತಿಂಗಳನ್ನುಏಷ್ಯನ್ಅಮೆರಿಕನ್ಮತ್ತು ಪೆಸಿಫಿಕ್ದ್ವೀಪ ರಾಷ್ಟ್ರಗಳ ಪಾರಂಪರಿಕ ತಿಂಗಳುಎಂದು ಘೋಷಿಸಿದ ನಂತರ ಟ್ರಂಪ್ಕಲ್ಪನಾ ಚಾವ್ಲಾ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ
ನವದೆಹಲಿ : ಭಾರತದ ಬಾಕ್ಸರ್ನೀರಜ್ಗೋಯತ್  ಅವರು ಡಬ್ಲ್ಯುಬಿಸಿಯ ವರ್ಷದ ಏಷ್ಯಾ ಬಾಕ್ಸರ್ಪ್ರಶಸ್ತಿಗೆ ಭಾಜನರಾ
ಗಿದ್ದಾರೆಡಬ್ಲ್ಯುಬಿಸಿಯಿಂದ ಗೌರವ ಸಿಕ್ಕಿದ್ದು ಸಂತಸ  ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಮರ್ಥ್ಯ ತೋರಬೇಕಿದೆಎಂದು ನೀರಜ್ಹೇಳಿದ್ದಾರೆ.  

ದುಬೈ : ಭಾರತ ಕ್ರಿಕೆಟ್ ತಂಡವು ಐಸಿಸಿ ಟೆಸ್ಟ್ತಂಡಗಳ ್ಯಾಂಕಿಂಗ್ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆಭಾರತ 2017–18ರಲ್ಲಿ ಆಡಿದ್ದ 13 ಟೆಸ್ಟ್ಪಂದ್ಯಗಳಲ್ಲಿ 10ರಲ್ಲಿ  ಜಯಿಸಿತ್ತು. ತಂಡವು ತನ್ನ ಖಾತೆಯಲ್ಲಿ ಒಟ್ಟು 125 ಪಾಯಿಂಟ್ಸ್  ಹೊಂದಿದೆ ದಕ್ಷಿಣ ಆಫ್ರಿಕಾದ ಖಾತೆಯಲ್ಲಿ 112 ಪಾಯಿಂಟ್ಸ್ಗಳಿವೆ. ನಾಲ್ಕು ಪಾಯಿಂಟ್ಸ್ಹೆಚ್ಚು ಗಳಿಸಿರುವ ಆಸ್ಟ್ರೇಲಿಯಾವು 106 ಪಾಯಿಂಟ್ಸ್ಹೊಂದಿದೆ. 102 ಪಾಯಿಂಟ್ಸ್ನೊಂದಿಗೆ ನ್ಯೂಜಿಲೆಂಡ್ನಾಲ್ಕು ಮತ್ತು 98 ಪಾಯಿಂಟ್ಸ್ಹೊಂದಿರುವ
ಇಂಗ್ಲೆಂಡ್ತಂಡವು ಐದನೇ ಸ್ಥಾನದಲ್ಲಿದೆ
ನವದೆಹಲಿ : ಭಾರತದ ಶೂಟರ್ಶಹಜಾರ್ರಿಜ್ವಿ ಅವರು ಮಂಗಳವಾರ ಐಎಸ್ಎಸ್ಎಫ್ಬಿಡುಗಡೆ ಮಾಡಿರುವ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕೊರಿಯಾದ ಚಾಂಗ್ವಾನ್ನಲ್ಲಿ ನಡೆದ, ಇತ್ತೀಚೆಗೆ ಮುಕ್ತಾಯಗೊಂಡ ಐಎಸ್ಎಸ್ಎಫ್ವಿಶ್ವಕಪ್ಶೂಟಿಂಗ್ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರು ತಮ್ಮ ಖಾತೆಯಲ್ಲಿ ಒಟ್ಟು 1654 ಪಾಯಿಂಟ್ಸ್ಹೊಂದಿದ್ದಾರೆ.  

ನವದೆಹಲಿ : ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೈಫಲ್ಯ ಕಂಡ ಕಾರಣ ಭಾರತ ಹಾಕಿ ತಂಡದ ಕೋಚ್ಶೊರ್ಡ್ ಮ್ಯಾರಿಜ್ ಅವರನ್ನು ಬದಲಿಸಲಾಗಿದೆ. ಅವರನ್ನು ಮಹಿಳಾ ತಂಡದ ಕೋಚ್ ಆಗಿ ನೇಮಿಸಿದ್ದು ಮಹಿಳೆಯರ  ಕೋಚ್ ಆಗಿದ್ದ ಹರೇಂದರ್ ಸಿಂಗ್ ಅವರನ್ನು ಪುರುಷ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಏಳು ತಿಂಗಳ ಹಿಂದೆ ರೋಲಂಟ್ಓಲ್ಟಮನ್ಸ್ ಅವರನ್ನು ವಜಾ ಮಾಡಲಾಗಿತ್ತು. ಆಗ ಮಹಿಳಾ ತಂಡದ ಕೋಚ್ಆಗಿದ್ದ ಶೊರ್ಡ್ ಅವರನ್ನು ಪುರುಷ ತಂಡಕ್ಕೆ ನೇಮಕ ಮಾಡಲಾಗಿತ್ತು. ಆರಂಭದಲ್ಲಿ ಅವರು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದರು. ಆದರೆ ಕಾಮನ್ವೆಲ್ತ್ ಕೂಟದ ಹಾಕಿಯಲ್ಲಿ ತಂಡಕ್ಕೆ ಕಂಚು ಗೆಲ್ಲುವುದಕ್ಕೂ ಆಗಲಿಲ್ಲ.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...