Saturday, May 5, 2018

ಮಂಗಳವಾರ ಮೇ 01-2018



  • ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಏಪ್ರಿಲ್ 30ರಂದು ಪ್ರಕಟವಾಗಿದ್ದು, ಸಲವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ಚಿಕ್ಕೋಡಿ ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆ ಶೇಕಡಾ 59.56ರಷ್ಟು ಫಲಿತಾಂಶ ಬಂದಿದೆ.  ಕಳೆದ ಸಾಲಿಗಿಂತ ಶೇ 7ರಷ್ಟು ಹೆಚ್ಚಳವಾಗಿದೆ. ಉತ್ತೀರ್ಣ ಪ್ರಮಾಣ 2016ರಲ್ಲಿ ಶೇ 57.2ರಷ್ಟಿತ್ತು. ಕಳೆದ ವರ್ಷ 52.38ಕ್ಕೆ ಕುಸಿದಿತ್ತು. ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಬಾರಿ ಎರಡನೇ ಸ್ಥಾನದಲ್ಲಿದೆ. ಕೊಡಗು ಮೂರು ಹಾಗೂ ಉತ್ತರ ಕನ್ನಡ ನಾಲ್ಕನೇ ಸ್ಥಾನ ಗಳಿಸಿವೆ. 2016ರಲ್ಲಿ .ಕನ್ನಡ ಅಗ್ರಪಟ್ಟದಲ್ಲಿತ್ತು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಒಂಬತ್ತು ವಿದ್ಯಾರ್ಥಿಗಳ ಪೈಕಿ 7ರಲ್ಲಿ ಬಾಲಕಿಯರೇ ಇದ್ದಾರೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಕೊಟ್ಟೂರಿನಇಂದೂ ಕಾಲೇಜಿ ಮೂವರು ಮೊದಲ ಮೂರು ಸ್ಥಾನ ಗಳಿಸಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ಮಾಧ್ಯಮ ಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಮೂರಕ್ಕಿಂತ ಹೆಚ್ಚು ಬಾರಿ ಶೂನ್ಯ ಫಲಿತಾಂಶ ಬಂದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದೂ ಎಚ್ಚರಿಸಿದರು.ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 59.95 ಹಾಗೂ ನಗರ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ 59.45ರಷ್ಟಿದೆ.
  • ಬೆಂಗಳೂರು : ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ಎರಡನೇ ಶನಿವಾರ ರಜೆಯ ಜತೆಗೆ ಹೆಚ್ಚುವರಿಯಾಗಿ ನಾಲ್ಕನೇ ಶನಿವಾರವೂ ರಜೆ ನೀಡುವಂತೆ ಆರನೇ ವೇತನ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ನೌಕರರ ವೇತನ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣೆ ಕುರಿತು ಶಿಫಾರಸು ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಆಯೋಗ ಸೋಮವಾರ ಸಲ್ಲಿಸಿದ ಅಂತಿಮ ವರದಿಯಲ್ಲಿ ಅಂಶಗಳು ಇವೆ. ಆಯೋಗದ ಪದಾಧಿಕಾರಿಗಳು 500 ಪುಟಗಳ ವರದಿಯನ್ನು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಸಲ್ಲಿಸಿದರು. ವೇತನ ಪರಿಷ್ಕರಣೆ ಸಂಬಂಧಿಸಿದ ಮೊದಲ ವರದಿಯನ್ನು ಸರ್ಕಾರ ಈಗಾಗಲೇ ಅನುಷ್ಠಾನ ಮಾಡಿದೆ
  • ಬೆಂಗಳೂರು : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್ಎಂಇ) ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮುತ್ತೂಟ್ ಪಾಪ್ಪಚ್ಚನ್ ಸಮೂಹವು ರಾಜ್ಯದಲ್ಲಿ ಚಿಟ್ಸ್ವಹಿವಾಟಿಗೆ ಚಾಲನೆ ನೀಡಿದೆ.ಹಣಕಾಸು ವರ್ಷದಲ್ಲಿ ₹ 1 ಸಾವಿರ ಕೋಟಿಗಳ ಚಿಟ್ಸ್ವಹಿವಾಟು ನಡೆಸುವ ನಿರೀಕ್ಷೆಯನ್ನು ಹೊಂದಿದ್ದು, ಹಣಕಾಸು ವರ್ಷದ ಅಂತ್ಯದೊಳಗೆ ವಹಿವಾಟನ್ನು ಕರ್ನಾಟಕ ರಾಜ್ಯದಾಚೆಗೂ ವಿಸ್ತರಿಸಲಾಗುವುದುಎಂದು ಸಮೂಹದ ಅಧ್ಯಕ್ಷ ಥಾಮಸ್ಜಾನ್ಮುತ್ತೂಟ್ಮಾಹಿತಿ ನೀಡಿದರು
  • ಬೆಂಗಳೂರು: ಸಂವಹನ, ಆರೋಗ್ಯ ಸುರಕ್ಷೆ, ಯಂತ್ರೋಪಕರಣ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ದಿಮೆಗಳಿಗೆ ತಂತ್ರಜ್ಞಾನ ಸೇವೆ ಒದಗಿಸುವ ಅನಲಾಗ್ ಡಿವೈಸ್ಸಂಸ್ಥೆ ಬೆಂಗಳೂರಿನಲ್ಲಿ ಭಾರತದ ಕೇಂದ್ರ ಕಚೇರಿಯನ್ನು ಸ್ಥಾಪಿಸಿದೆ. ಸಂಸ್ಥೆಯ ಮುಖ್ಯ 3 ಕಚೇರಿಗಳಲ್ಲಿ ಇದೂ ಒಂದಾಗಿದ್ದು ಕಚೇರಿ ಮೂಲಕ ಕೈಗಾರಿಕೆ, ಆರೋಗ್ಯ ಸುರಕ್ಷೆ, ಐಒಟಿ (ಇಂಟರ್ನೆಟ್ ಆಫ್ಥಿಂಗ್ಸ್‌), ಭದ್ರತೆ, ಸಂವಹನ ಮತ್ತು ಇಂಧನ ಕ್ಷೇತ್ರಗಳ ಉದ್ದಿಮೆಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ತಂತ್ರಜ್ಞಾನ ಸೇವೆಗಳನ್ನು ಸಂಸ್ಥೆ ನೀಡಲಿದೆ.ಬೆಂಗಳೂರಿನಲ್ಲಿನ ಕಚೇರಿಯು 6 ಮಹಡಿಗಳನ್ನು ಹೊಂದಿದ್ದು, ಆತ್ಯಾಧುನಿಕ ಪ್ರಯೋಗಾಲಯ, ಯೋಗ ಕೇಂದ್ರ, ಇತ್ಯಾದಿ ಸೌಲಭ್ಯ ಗಳನ್ನು ಒಳಗೊಂಡಿದೆ. ಇಲ್ಲಿ 900 ಉದ್ಯೋಗಿಗಳು ಕೆಲಸ ಮಾಡಬಹು ದಾಗಿದೆಸಂಸ್ಥೆಯ ಸಿಬ್ಬಂದಿ ಸಂಖ್ಯೆ ಈಗ ಶೇ 50ರಷ್ಟು ಹೆಚ್ಚಳವಾಗಲಿದೆ’.  
  • ನವದೆಹಲಿ : ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 1,800 ಸಂಸ್ಥೆಗಳಿಗೆ ವಿಧಿಸಿರುವ ದಂಡ ಪಾವತಿಯಾಗಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಹಿತಿ ನೀಡಿದೆ. ಷೇರುಪೇಟೆಯಲ್ಲಿ ವಹಿವಾಟಿಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳುಸೆಬಿನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿವೆ. 1998ರಿಂದ ಕೆಲವು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ
  • ನವದೆಹಲಿ : ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಸುಪ್ರಿಂ ಕೋರ್ಟ್ಗೆ ಮನವಿ ಮಾಡಿದೆ
  • ನವದೆಹಲಿ : ವರ್ಷಾಂತ್ಯದಲ್ಲಿ ಟೆನಿಸ್ವಿಶ್ವಕಪ್ಆಯೋಜಿಸಲು ಅಂತರರಾಷ್ಟ್ರೀಯ ಟೆನಿಸ್ಫೆಡರೇಷನ್‌ (ಐಟಿಎಫ್‌) ನಿರ್ಧರಿಸಿದೆ. ಯೋಜನೆಗೆ ಐಟಿಎಫ್ನಿರ್ದೇಶಕರ ಮಂಡಳಿ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಒರ್ಲಾಂಡೊದಲ್ಲಿ ಆಗಸ್ಟ್ನಲ್ಲಿ ನಡೆಯುವ ಐಟಿಎಫ್ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಉದ್ದೇಶಿತ ವಿಶ್ವಕಪ್ನಲ್ಲಿ 18 ರಾಷ್ಟ್ರಗಳು ಸ್ಪರ್ಧಿಸಲಿದ್ದು, ಒಂದೇ ಸ್ಥಳದಲ್ಲಿ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆವಿಶ್ವಕಪ್ಆಯೋಜಿಸಲು ಕಾಸ್ಮೊಸ್ಸಂಸ್ಥೆಯೊಂದಿಗೆ ಐಟಿಎಫ್ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಸಂಸ್ಥೆಯು 25 ವರ್ಷದ ಅವಧಿಗೆ ಸುಮಾರು 20 ಸಾವಿರ ಕೋಟಿ ಹಣ ಹೂಡಿಕೆ ಮಾಡಲು ಮುಂದಾಗಿದೆ
  • ನವದೆಹಲಿ : ಭಾರತದ ಪ್ರಜ್ಞೇಶ್ಗುಣೇಶ್ವರನ್ಅವರು ಸೋಮವಾರ ಎಟಿಪಿ ಬಿಡುಗಡೆ ಮಾಡಿರುವ ವಿಶ್ವಕ್ರಮಾಂಕ ಪಟ್ಟಿಯಲ್ಲಿ 176ನೇ ಸ್ಥಾನಕ್ಕೇರಿದ್ದಾರೆಚೀನಾದ ಅನಿಂಗ್ನಲ್ಲಿ ಭಾನುವಾರ ನಡೆದ ಎಟಿಪಿ ಚಾಲೆಂಜರ್ಟೆನಿಸ್ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ನಂತರ ಅವರು 84 ಸ್ಥಾನಗಳಷ್ಟು ಬಡ್ತಿ ಹೊಂದಿದ್ದಾರೆ.   
ನಿಮ್ಮ ಅನಿಸಿಕೆ ಅಭಿಪ್ರಾಯ ಗಳಿಗೆ ಕಾಮೆಂಟ್ ಬಾಕ್ಸ್ಲ್  ಕಾಮೆಂಟ್ ಮಾಡಿ.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...