Tuesday, May 15, 2018

ಮಂಗಳವಾರ ಮೇ 15-2018



  • ಬೆಂಗಳೂರು: ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ವಿದ್ಯುತ್ದರವನ್ನು ಪ್ರತಿ ಯೂನಿಟ್ಗೆ ಶೇ 6ರಷ್ಟು ಏರಿಕೆ ಮಾಡಲಾಗಿದೆ.ಕರ್ನಾಟಕ ವಿದ್ಯುತ್ನಿಯಂತ್ರಣ ಆಯೋಗವು (ಕೆಇಆರ್ಸಿ) 2018–19 ಸಾಲಿನ ಪರಿಷ್ಕೃತ ವಿದ್ಯುತ್ ದರಗಳನ್ನು ಸೋಮವಾರ ಪ್ರಕಟಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 25 ಪೈಸೆಯಿಂದ 38 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಉಳಿದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಏಕರೂಪದ ಏರಿಕೆ ಮಾಡಲಾಗಿದೆ. ಇಲ್ಲಿ ಏರಿಕೆ ಪ್ರಮಾಣ 20 ಪೈಸೆಯಿಂದ 60 ಪೈಸೆಯಷ್ಟು ಇದೆ. ಹೊಸ ದರ ಏಪ್ರಿಲ್‌ 1ರಿಂದಲೇ ಪೂರ್ವಾನ್ವಯವಾಗಲಿದೆ.
  • ಗಾಜಾಜೆರುಸಲೇಂನಲ್ಲಿ ಅಮೆರಿಕದ ರಾಯಭಾರ ಕಚೇರಿ ಸ್ಥಾಪನೆಗೆ ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ 41 ಪ್ಯಾಲೆಸ್ಟೀನಿಯರು ಇಸ್ರೇಲಿ ಸೇನಾ ಪಡೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. 2014 ನಂತರ ನಡೆದ ಅತಿದೊಡ್ಡ ಹಿಂಸಾಚಾರ ಇದು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ಯಾಲೆಸ್ಟೀನಿಯರು ಗಾಜಾ ಪಟ್ಟಿಯಲ್ಲಿ ಗೋಧಿ ಬೆಳೆಗೆ ಮತ್ತು ಟೈರ್ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಇಸ್ರೇಲಿ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ
  • ಕಠ್ಮಂಡುಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಚೀನಾದ ಪರ್ವತಾರೋಹಿ ಕ್ಸಿಯಾ ಬೊಯು ಸಾಕ್ಷಿ. ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್ಅನ್ನು ಸೋಮವಾರ ಏರಿದ ಕ್ಸಿಯಾವಿಶೇಷಸಾಧನೆಗೆ ಪಾತ್ರರಾಗಿದ್ದಾರೆ. ವಿಶೇಷ ಏಕೆಂದರೆ, ಕ್ಸಿಯಾಗೆ ಎರಡೂ ಕಾಲುಗಳಿಲ್ಲತೀವ್ರ ಶೈತ್ಯದ ಕಾರಣ ಚರ್ಮದಲ್ಲಿ ಹುಣ್ಣಾಗಿ ಕ್ಸಿಯಾ ಎರಡೂ ಕಾಲುಗಳನ್ನು ನಾಲ್ಕು ದಶಕಗಳ ಹಿಂದೆಯೇ ಕಳೆದುಕೊಂಡಿದ್ದಾರೆ. ಶಿಖರವೇರುವ ಪ್ರಯತ್ನದಲ್ಲಿದ್ದಾಗಲೇ ಅವರು ಹಿಮ ಹುಣ್ಣಿಗೆ ತುತ್ತಾಗಿದ್ದರು. ಛಲ ಬಿಡದ ಕ್ಸಿಯಾ, ಐದನೇ ಪ್ರಯತ್ನದಲ್ಲಿ 29,029 ಅಡಿ (8,848 ಮೀಟರ್) ಎತ್ತರದ ಶಿಖರ ಏರಿದ್ದಾರೆ. ಇವರೊಂದಿಗೆ ಇತರೆ ಏಳು ಜನರ ತಂಡವೂ ಶಿಖರ ಏರುವಲ್ಲಿ ಯಶಸ್ವಿಯಾಗಿದೆ


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...