Friday, May 4, 2018

ಭಾನುವಾರ ಏಪ್ರಿಲ್ 29-2018


ನವದೆಹಲಿ : ರಾಷ್ಟ್ರೀಕೃತ ಬ್ಯಾಂಕ್ಗಳ ನಿವೃತ್ತ ನೌಕರರಿಗೆ ನೀಡಲಾಗುವ ಪಿಂಚಣಿ (ನಿವೃತ್ತಿ ವೇತನ) ಸೌಲಭ್ಯವನ್ನು ಗ್ರಾಮೀಣ ಬ್ಯಾಂಕ್ಗಳ ಸಿಬ್ಬಂದಿಗೂ ವಿಸ್ತರಿಸುವಂತೆ ಆದೇಶಿಸಿ ಸುಪ್ರೀಂ ಕೋರ್ಟ್ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಕುರಿಯನ್ಜೋಸೆಫ್ನೇತೃತ್ವದ ವಿಭಾಗೀಯ ಪೀಠ ಏಪ್ರಿಲ್ 25ರಂದು ನೀಡಿರುವ ತೀರ್ಪಿನಿಂದಾಗಿ ದೇಶದಾದ್ಯಂತ ಇರುವ 56ಕ್ಕೂ ಅಧಿಕ ಗ್ರಾಮೀಣ ಬ್ಯಾಂಕ್ಗಳ ಅಂದಾಜು ಒಂದು ಲಕ್ಷ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ದೊರೆಯಲಿದೆ. ಪಿಂಚಣಿ ಸಮಾನತೆಗೆ ಸಂಬಂಧಿಸಿದಂತೆ ರಾಜಸ್ಥಾನ ಹೈಕೋರ್ಟ್‌ 2012ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠವು, ರಾಷ್ಟ್ರೀಕೃತ ಬ್ಯಾಂಕ್ಗಳ ನೌಕರರಿಗೆ ಪಿಂಚಣಿ ನೀಡುವ ನಿಟ್ಟಿನಲ್ಲಿ 1993 ಅಕ್ಟೋಬರ್‌ 29ರಂದು ರೂಪಿಸಿರುವ ಯೋಜನೆ ಅನ್ವಯ ಮೂರು ತಿಂಗಳೊಳಗೆ ಗ್ರಾಮೀಣ ಬ್ಯಾಂಕ್ ನೌಕರರ ಪಿಂಚಣಿ ಕುರಿತ ರೂಪುರೇಷೆ ಸಿದ್ಧಪಡಿಸಿ, ಯೋಜನೆ ಜಾರಿಗೊಳಿಸುವಂತೆ ನಿರ್ದೇಶನ ನೀಡಿದೆ
  • ನವದೆಹಲಿಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ತೇಜಸ್ಶುಕ್ರವಾರ ಕ್ಷಿಪಣಿ ಉಡಾವಣಾ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದೆ. ವಿಮಾನವನ್ನು ಸೇನಾಪಡೆಗಳ ಸೇವೆಗೆ ನಿಯೋಜಿಸಲು ಅಗತ್ಯವಿರುವಅಂತಿಮ ಕಾರ್ಯಾಚರಣಾ ಅನುಮತಿಪಡೆಯಲು ಪರೀಕ್ಷೆ ನೆರವಾಗಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ
  • ಬೆಂಗಳೂರು : ಫೋರ್ಡ್ಇಂಡಿಯಾ ಸಂಸ್ಥೆಯು ಕಾಂಪ್ಯಾಕ್ಟ್ಯುಟಿಲಿಟಿ ವೆಹಿಕಲ್‌ (ಸಿಯುವಿ) ‘ಫೋರ್ಡ್ಫ್ರೀಸ್ಟೈಲ್‌’ ಅನ್ನು ರಾಜ್ಯದ ಮಾರುಕಟ್ಟೆಗೆ ಶನಿವಾರ ಬಿಡುಗಡೆ ಮಾಡಿದೆಎಕ್ಸ್ಷೋರೂಂ ಬೆಲೆ ₹ 5.09 ಲಕ್ಷದಿಂದ ₹ 7.89 ಲಕ್ಷದವರೆಗೆ ಇದೆ.

No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...