Thursday, May 3, 2018

ಶುಕ್ರವಾರ ಏಪ್ರಿಲ್ 27-2018



  • ನವದೆಹಲಿ : ಸುಪ್ರೀಂ ಕೋರ್ಟ್ನ್ಯಾಯಮೂರ್ತಿಯಾಗಿ ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ಅವರನ್ನು ನೇಮಿಸುವಂತೆ ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್ಕಳುಹಿಸಿದೆ. ಅವರ ಬಡ್ತಿಸಮರ್ಪಕಅಲ್ಲ ಎಂದು ಹೇಳಿದೆ.  ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರಪತಿ ಮತ್ತು ಪ್ರಧಾನಿಯ ಅನುಮೋದನೆ ಇದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ಅವರು ಮಿಶ್ರಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ದೀರ್ಘ ಕಾಲದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರಾತಿನಿಧ್ಯವೇ ಇಲ್ಲ ಎಂಬ ಅಂಶವನ್ನೂ ಪತ್ರದಲ್ಲಿ  ಪ್ರಸ್ತಾಪಿಸಲಾಗಿದೆ. ಜೋಸೆಫ್ಅವರ ಹೆಸರನ್ನು ಮತ್ತೆ ಶಿಫಾರಸು ಮಾಡುವ ಅಧಿಕಾರ ಕೊಲಿಜಿಯಂಗೆ ಇದೆ. ಕೊಲಿಜಿಯಂ ಹಟ ಹಿಡಿದರೆ ಸರ್ಕಾರ ನೇಮಕ ಮಾಡಲೇ ಬೇಕು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  • ನವದೆಹಲಿ : ನೂತನ ಪಕ್ಷ ಲೋಕ್ತಾಂತ್ರಿಕ್ಜನತಾ ದಳ  (ಎಲ್ಜೆಡಿ) ಸ್ಥಾಪಿಸಿರುವುದಾಗಿ ಜೆಡಿ(ಯು) ಬಂಡಾಯ ನಾಯಕ ಶರದ್ಯಾದವ್ಬೆಂಬಲಿಗರು ತಿಳಿಸಿದ್ದಾರೆ. ಮೂಲಕ ನಿತೀಶ್ಕುಮಾರ್ನೇತೃತ್ವದ ಪಕ್ಷದಿಂದ ಅಧಿಕೃತವಾಗಿ ವಿಭಜನೆಯಾಗುವ ಸೂಚನೆ ನೀಡಿದ್ದಾರೆ.
  • ಚೆನ್ನೈ : ‘ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ನಮ್ಮ ಬಳಿ ಇಲ್ಲಎಂದು ಮದ್ರಾಸ್ ಹೈಕೋರ್ಟ್ಗೆ ಅಪೋಲೊ ಆಸ್ಪತ್ರೆ ಗುರುವಾರ ತಿಳಿಸಿದೆ. ಜಯಲಲಿತಾ ಅವರ ಮಗಳು ಎಂದು ಹೇಳಿಕೊಳ್ಳುತ್ತಿರುವ ಬೆಂಗಳೂರಿನ ಎಸ್. ಅಮೃತಾ ಎನ್ನುವವರು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಆಸ್ಪತ್ರೆ ಹೇಳಿಕೆ ನೀಡಿದೆ. ತಾವು ಜಯಾ ಅವರ ಮಗಳಾಗಿರುವ ಬಗ್ಗೆ ಡಿಎನ್ ಪರೀಕ್ಷೆಯನ್ನು ನಡೆಸಲು ಆಸ್ಪತ್ರೆಗೆ ಆದೇಶಿಸಬೇಕು ಎಂದು ಅವರು ಕೋರಿದ್ದರು. ಅನಾರೋಗ್ಯಕ್ಕೀಡಾಗಿದ್ದ  ಜಯಲಲಿತಾ 2016 ಸೆಪ್ಟೆಂಬರ್‌ 22ರಂದು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಅವರು ಸ್ಪಂದಿಸದ ಕಾರಣ, ಅದೇ ಡಿಸೆಂಬರ್‌ 5ರಂದು ನಿಧನರಾದರು.
  • ಮುಂಬೈ: ಆರು ಟಾಟಾ ಟ್ರಸ್ಟ್ಗಳಿಗೆ ಆದಾಯ ತೆರಿಗೆ ಇಲಾಖೆಯು ನೀಡಿದ್ದ ಷೋಕಾಸ್ನೋಟಿಸ್ಗೆ ಬಾಂಬೆ ಹೈಕೋರ್ಟ್ತಡೆಯಾಜ್ಞೆ ನೀಡಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 12 ಅನ್ವಯ, ಟ್ರಸ್ಟ್ಗಳ ನೋಂದಣಿ ರದ್ದುಪಡಿಸುವ ಸಂಬಂಧ ನೋಟಿಸ್ಜಾರಿಯಾಗಿದೆ. ಇದಕ್ಕೆ ಹೈಕೋರ್ಟ್ಮಧ್ಯಂತರ ತಡೆ ನೀಡಿದೆ
  • ಮುಂಬೈ : ಟಾಟಾ ಸಮೂಹದ ಜಾಗತಿಕ ಕಾರ್ಪೊರೇಟ್ವ್ಯವಹಾರಗಳ ಅಧ್ಯಕ್ಷರನ್ನಾಗಿ ಡಾ. ಎಸ್‌. ಜೈಶಂಕರ್ಅವರನ್ನು ನೇಮಿಸಲಾಗಿದೆ ಎಂದು ಟಾಟಾ ಸನ್ಸ್ಪ್ರಕಟಿಸಿದೆ. ಜೈಶಂಕರ್ಅವರು, 2015 ರಿಂದ 2018ರವರೆಗೆ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಅಮೆರಿಕ ಮತ್ತು ಚೀನಾದಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ‘ಅವರ ವ್ಯಾಪಕ ಅನುಭವವು ಜಾಗತಿಕವಾಗಿ ಸಂಸ್ಥೆಯ ಬ್ರ್ಯಾಂಡ್ಬಲಪಡಿಸಲು ನೆರವಾಗಲಿದೆಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್‌. ಚಂದ್ರಶೇಖರನ್ಹೇಳಿದ್ದಾರೆ
  • ಇಸ್ಲಾಮಾಬಾದ್ : ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ ಅವರನ್ನು ಇಲ್ಲಿನ ಹೈಕೋರ್ಟ್ ಅಹರ್ನಗೊಳಿಸಿ ಆದೇಶಿಸಿದೆ. ಸಂಯುಕ್ತ ಅರಬ್ಒಕ್ಕೂಟ (ಯುಎಇ) ಮೂಲದ ಇಂಟರ್ನ್ಯಾಷನಲ್ ಮೆಕ್ಯಾನಿಕಲ್ ಅಂಡ್ ಎಲೆಕ್ಟ್ರಿಕಲ್ ಕಂಪನಿಯಲ್ಲಿ (ಐಎಂಎಸಿಒ)‌ ಆಸೀಫ್‌, 2011ರಿಂದ ಸಲಹೆಗಾರರಾಗಿದ್ದು, ವೇತನ ಪಡೆಯುತ್ತಿದ್ದಾರೆ. ಆದರೆ, 2013 ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಮಾಹಿತಿ ಬಹಿರಂಗಗೊಳಿಸಿಲ್ಲ. ಹೀಗಾಗಿ ಅವರನ್ನು ಹುದ್ದೆಯಿಂದ ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ಮೂವರು ಸದಸ್ಯರನ್ನು ಒಳಗೊಂಡ ಇಸ್ಲಾಮಾಬಾದ್ಹೈಕೋರ್ಟ್ ವಿಶೇಷ ಪೀಠ, ‘ಮಾಹಿತಿ ಬಚ್ಚಿಟ್ಟ ಕಾರಣಕ್ಕೆ ಸಂಸತ್ ಸದಸ್ಯ ಸ್ಥಾನವನ್ನು ಅನರ್ಹಗೊಳಿಸಲಾಗಿದೆಎಂದು ಘೋಷಿಸಿದೆ
  • ಕೋಲ್ಕತ್ತ : ಲಾಸ್ಏಂಜಲೀಸ್ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆಯಾಗಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಸಿಸಿಯಲ್ಲಿರುವ 104 ಸದಸ್ಯರಿಗೆ ಟ್ವೆಂಟಿ–20 ಕ್ರಿಕೆಟ್ ಆಡಲು ಮಾನ್ಯತೆ ನೀಡಲಾಗಿದೆ. ಮೂಲಕ ಒಲಿಂಪಿಕ್ಸ್ನಲ್ಲಿ ಅರ್ಹತೆ ಪಡೆಯಲು ಹಾದಿ ಸುಗಮವಾಗಲಿದೆ. ಶೀಘ್ರದಲ್ಲಿಯೇ ಐಒಸಿ (ಅಂತರರಾಷ್ಟ್ರೀಯ ಒಲಿಂಪಿಕ್ಸ್ಸಮಿತಿ) ಮುಖ್ಯಸ್ಥರಿಗೆ ಪ್ರಸ್ತಾವ ಸಲ್ಲಿಸಲಾಗುವುದುಎಂದು ಹೇಳಿದರು. ‘2024 ಒಲಿಂಪಿಕ್ಸ್ಗೆ ಸೇರ್ಪಡೆ ಮಾಡುವಂತೆ ಪ್ರಸ್ತಾವ ಸಲ್ಲಿಸುವ ಸಮಯ ಮುಗಿದು ಹೋಗಿದೆ. ಆದ್ದರಿಂದ 2028 ಕೂಟದಲ್ಲಿ ಅವಕಾಶ ನೀಡಲು ಕೋರುತ್ತೇವೆ. 1900ನೇ ಇಸವಿಯಲ್ಲಿ ಪ್ಯಾರಿಸ್ನಲ್ಲಿ ನಡೆಇದ್ದ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ಆಡಿಸಲಾಗಿತ್ತು
  • ಬಿಸಿಸಿಐ ನಿರಾಸಕ್ತಿ : ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ಸೇರ್ಪಡೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೆಚ್ಚು ಆಸಕ್ತಿ ತೋರಿಲ್ಲ. ‘ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರಿದರೆ ಬಿಸಿಸಿಐ ಭಾರತ ಒಲಿಂಪಿಕ್ಸ್ಸಂಸ್ಥೆಯ (ಐಒಎ) ಅಧೀನಕ್ಕೆ ಒಳಪಡಬೇಕಾಗುತ್ತದೆ. ಅದರಿಂದಾಗಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳಬೇಕಾಗುತ್ತದೆಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕುರಿತು ಪ್ರತಿಕ್ರಿಯಿಸಿದ ರಿಚರ್ಡ್ಸನ್, ‘ಬಿಸಿಸಿಐ ಮತ್ತು ಐಒಎ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕಾಗಿದೆ. ಕ್ರಿಕೆಟ್ಅನ್ನು ಸೇರ್ಪಡೆ ಮಾಡುವ ಮೂಲಕ ಒಲಿಂಪಿಕ್ಸ್ಕೂಟದ ಘನತೆ ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕಾದ ಅವಶ್ಯಕತೆ ಇದೆಎಂದರು.


No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...