Wednesday, May 2, 2018

ಗುರುವಾರ ಏಪ್ರಿಲ್ 26-2018



  • ಜೋಧಪುರ : ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು 5 ವರ್ಷಗಳ ಹಿಂದೆ ತಮ್ಮ ಆಶ್ರಮದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ. ಅವರಿಗೆ ಜೋಧಪುರದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 1 ಲಕ್ಷ ದಂಡವನ್ನೂ ಕೂಡ ವಿಧಿಸಲಾಗಿದೆ ಎಂದು ಪಬ್ಲಿಕ್ಪ್ರಾಸಿಕ್ಯೂಟರ್ಪೊಕರ್ ರಾಮ್ಬಿಷ್ಣೋಯಿ ಅವರು ಹೇಳಿದ್ದಾರೆ.  ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ ಶರ್ಮಾ ಅವರು ಜೋಧಪುರ ಕೇಂದ್ರ ಕಾರಾಗೃಹದಲ್ಲಿ ತೀರ್ಪು ನೀಡಿದರು. 77 ವರ್ಷದ ಆಸಾರಾಂ ಅವರು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆಪ್ರಕರಣದ ಇತರ ಆರೋಪಿಗಳಾಗಿದ್ದ ಶಿಲ್ಪಿ ಮತ್ತು ಶರದ್ಅವರೂ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಮಾನಿಸಿದ್ದು ಅವರಿಗೆ ತಲಾ 20 ವರ್ಷ ಶಿಕ್ಷೆ ವಿಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಪ್ರಕಾಶ್ಮತ್ತು ಶಿವ ಅವರನ್ನು ಖುಲಾಸೆ ಮಾಡಲಾಗಿದೆರಾಜಸ್ಥಾನ ಹೈಕೋರ್ಟ್ ನಿರ್ದೇಶನದ ಅನುಸಾರ ವಿಚಾರಣಾ ನ್ಯಾಯಾಲಯವು ತೀರ್ಪು ನೀಡಿದೆ
  • ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಇಬ್ಬರು ಆರೋಪಿಗಳು ಸುಪ್ರೀಂ ಕೋರ್ಟ್ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆಯನ್ನು ಚಂಡೀಗಡದ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಆಗ್ರಹಿಸಿ ಬಾಲಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿ ಪ್ರಮುಖ ಆರೋಪಿಗಳಾದ ಸಾಂಜಿರಾಮ್ಮತ್ತು ವಿಶಾಲ್ಜಂಗೋತ್ರ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ
  • ನವದೆಹಲಿ : ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ರಾಜಕೀಯ ಸಲಹಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾ ಮತ್ತು ಸಾಮಾಜಿಕ ಜಾಲತಾಣ ಫೇಸ್ಬುಕ್ಗೆ ಕೇಂದ್ರ ಸರ್ಕಾರ ಬುಧವಾರ ಎರಡನೇ ನೋಟಿಸ್ಕಳಿಸಿದೆ. ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಮೇ 10 ಒಳಗಾಗಿ ವಿವರಣೆ ನೀಡುವಂತೆ ಎರಡೂ ಸಂಸ್ಥೆಗಳಿಗೆ ಗಡುವು ನೀಡಲಾಗಿದೆ. ಮೊದಲು ನೀಡಿದ್ದ ನೋಟಿಸ್ಗೆ ತಿಂಗಳ ಮೊದಲ ವಾರದಲ್ಲಿ ಎರಡೂ ಸಂಸ್ಥೆಗಳು ಉತ್ತರ ನೀಡಿದ್ದವು. ಆದರೆ ಮೊದಲು ನೀಡಿದ್ದ ನೋಟಿಸ್ಗೆ ಕೇಂಬ್ರಿಜ್ ಅನಲಿಟಿಕಾ ನೀಡಿದ್ದ ವಿವರಣೆ ಸಾಕಾಗುವುದಿಲ್ಲ ಎಂದು ಹೇಳಿರುವ ಕೇಂದ್ರ, ಮತ್ತಷ್ಟು ಪೂರಕ ಮಾಹಿತಿಗಳನ್ನು ಕೋರಿದೆಭವಿಷ್ಯದಲ್ಲಿ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಫೇಸ್ಬುಕ್ಗೆ ಸೂಚಿಸಿದೆ. ಮೊದಲ ನೋಟಿಸ್ಗೆ ಉತ್ತರಿಸಿದ್ದ ಫೇಸ್ಬುಕ್‌, 5.62 ಲಕ್ಷ ಭಾರತೀಯ ಬಳಕೆದಾರ ಮಾಹಿತಿ ಸೋರಿಕೆಯಾಗಿದೆ ಎಂದು ಒಪ್ಪಿಕೊಂಡಿತ್ತು
  • ಚೆನ್ನೈ : ‘ಎಂಜಿನ್ರಹಿತಟ್ರೇನ್‌–18 ಎಂಬ ವಿನೂತನ ರೈಲು ಇದೇ ಜುಲೈಯಲ್ಲಿ ಸಿದ್ಧವಾಗಲಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ರೈಲು ಪ್ರತಿಷ್ಠಿತ ಶತಾಬ್ದಿ ರೈಲಿಗೆ ಪರ್ಯಾಯವಾಗಬಹುದು ಎಂದು ಭಾವಿಸಲಾಗಿದೆ. ಚೆನ್ನೈನ ಇಂಟೆಗ್ರಲ್ಕೋಚ್ಫ್ಯಾಕ್ಟರಿ (ಐಸಿಎಫ್‌) ರೈಲನ್ನು ಸಿದ್ಧಪಡಿಸಿದೆ. 16 ಬೋಗಿಗಳಿರುವ ಮೊದಲ ರೈಲು ದೆಹಲಿ ಭೋಪಾಲ್ಅಥವಾ  ಚೆನ್ನೈಬೆಂಗಳೂರು ನಡುವೆ ವರ್ಷದ ಕೊನೆಗೆ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ರೈಲಿಗೆ ಪ್ರತ್ಯೇಕವಾದ ಎಂಜಿನ್ಇರುವುದಿಲ್ಲ. ಪ್ರತಿ ಬೋಗಿಯ ಕೆಳಭಾಗದಲ್ಲಿ ಅಳವಡಿಸಲಾಗುವ ಕರ್ಷಣ ಯಂತ್ರ ಬೋಗಿಯನ್ನು ಮುಂದಕ್ಕೆ ಒಯ್ಯುತ್ತದೆಇದು ಸಂಪೂರ್ಣವಾಗಿ ದೇಶೀಯವಾಗಿ ತಯಾರಾಗುತ್ತಿದೆನಮ್ಮ ಎಂಜಿನಿಯರ್ಗಳೇ ರೈಲನ್ನು ವಿನ್ಯಾಸ ಮಾಡಿದ್ದಾರೆ. ಇದು ಸಂಪೂರ್ಣವಾಗಿ ದೇಶೀಯ ರೈಲು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದುಎಂದು ಐಸಿಎಫ್ ಪ್ರಧಾನ ವ್ಯವಸ್ಥಾಪಕ ಸುಧಾಂಶು ಮಣಿ ತಿಳಿಸಿದ್ದಾರೆ
  • ವಾಷಿಂಗ್ಟನ್ : ಎಚ್1ಬಿ ವೀಸಾದಾರರ ಸಂಗಾತಿಗಳು (ಪತಿ ಅಥವಾ ಪತ್ನಿ) ಕೆಲಸ ಮಾಡಲು ಅವಕಾಶ ಮಾಡಿಕೊಡುವ ಎಚ್4 ವೀಸಾವನ್ನು ರದ್ದು ಮಾಡುವ ಅಮೆರಿಕ ಸರ್ಕಾರದ ಚಿಂತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ ಪ್ರಭಾವಿ ಜನಪ್ರತಿನಿಧಿಗಳು ಮತ್ತು ಅಮೆರಿಕದ ಮಾಹಿತಿ ತಂತ್ರಜ್ಞಾನ (.ಟಿ) ಉದ್ದಿಮೆಯ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ‘ಸದ್ಯ ಇರುವ ನಿಯಮ ಕೈಬಿಟ್ಟು, ಅಮೆರಿಕ ಉದ್ದಿಮೆ ಕ್ಷೇತ್ರದಲ್ಲಿರುವ ಸಾವಿರಾರು ಜನರ ಉದ್ಯೋಗ ಕಸಿಯುವುದರಿಂದ ಅವರ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜತೆಗೆ ನಮ್ಮ ಅರ್ಥ ವ್ಯವಸ್ಥೆ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ’‍ ಎಂದು ಎಫ್ಡಬ್ಲ್ಯುಡಿ. ಯುಎಸ್ ತಂತ್ರಜ್ಞಾನ ಸಮುದಾಯವು ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಫೇಸ್ಬುಕ್, ಗೂಗಲ್ ಮತ್ತು ಮೈಕ್ರೋಸಾಫ್ಟ್ಗಳಂಥ .ಟಿ ದಿಗ್ಗಜ ಸಂಸ್ಥೆಗಳು ಎಫ್ಡಬ್ಲ್ಯುಡಿ.ಯುಎಸ್ ಅನ್ನು ಹುಟ್ಟುಹಾಕಿವೆ
  • ಲಂಡನ್ : ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 138ನೇ ಸ್ಥಾನಕ್ಕೆ ಕುಸಿದಿದೆ ಎಂದು ರಿಪೋರ್ಟರ್ಸ್ವಿತೌಟ್ಬಾರ್ಡರ್ಸ್‌ (ಆರ್ಎಸ್ಎಫ್‌) ವರದಿ ಹೇಳಿದೆ. ಪತ್ರಕರ್ತರ ಮೇಲಿನ ದೈಹಿಕ ಹಲ್ಲೆ, ಪತ್ರಕರ್ತೆ ಗೌರಿ ಲಂಕೇಶ್ಹತ್ಯೆಯಂತಹ ಪ್ರಕರಣಗಳಿಂದಾಗಿ ಭಾರತ ಎರಡು ಸ್ಥಾನ ಕುಸಿದಿದೆ ಎಂದು ವರದಿ ತಿಳಿಸಿದೆ. ಅಧ್ಯಯನದಲ್ಲಿ 180 ದೇಶಗಳನ್ನು ಪರಿಗಣಿಸಲಾಗಿದೆ. ‘2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಹಿಂದೂ ಮೂಲಭೂತವಾದಿಗಳು ಪತ್ರಕರ್ತರ ವಿರುದ್ಧ ಕಿಡಿ ಕಾರುವುದು ಹೆಚ್ಚಿದೆಎಂದು ವರದಿ ಹೇಳಿದೆ.

No comments:

Post a Comment

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...