Wednesday, May 2, 2018

ಶನಿವಾರ ಏಪ್ರಿಲ್ 28-2018


  •  ದಾವಣಗೆರೆ : ಕುಕ್ಕವಾಡ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಯಂತ್ರ ದುರಸ್ಥಿ ವೇಳೆ ವಿಷಾನಿಲ ಸೋರಿಕೆಯಿಂದ  ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
  •  ಸತತ 3 ವರ್ಷಗಳಿಂದ ಶೂನ್ಯ ಪಲಿತಾಂಶವನ್ನು ಪಡೆದ 10 ಖಾಸಗಿ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ಹಿಂಪಡೆದಿದೆ.
  •  ಬೆಂಗಳೂರು : ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಚುನಾವಣ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಟಿ. ಕೆ. ಅನಿಲ್ ಕುಮಾರ್, ಬೆಳಗಾವಿ ವಿಭಾಗೀಯ ಆಯುಕ್ತರು, ಪಿ ಹೇಮಲತಾ ಮೈಸೂರು ವಿಭಾಗೀಯ ಆಯುಕ್ತರು.
  •  ನವ ದೆಹಲಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಹಿರಿಯ ವಕೀಲೆ ಇಂದೂ ಮಲ್ಹೋತ್ರಾ ಅವರಿಗೆ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಅವರು ಶುಕ್ರವಾರ ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ವಕೀಲ ಸಮುದಾಯದಿಂದ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದೂ ಪಾತ್ರರಾಗಿದ್ದಾರೆ.
  • ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ (ಯುಪಿಎಸ್ಸಿ) ನಾಗರೀಕ ಸೇವೆಗಳ ಪರೀಕ್ಷೆಯಲ್ಲಿ ರಾಜ್ಯದ 26 ಅಭ್ಯರ್ಥಿಗಳು ವಿವಿಧ ರ್ಯಾಂಕ್ ಪಡೆದಿದ್ದಾರೆ. ಬೀದರ್ ನ ರಾಹುಲ್ ಶಿಂದೆ 95ನೇ ರ್ಯಾಂಕ್ ಗಳಿಸಿದ್ದಾರೆ.
  • ವಾಷಿಂಗ್ ಟನ್  : ಸಾಫ್ಟ್ ವೇರ್ ದೈತ್ಯ ಸಂಸ್ಥೆ ಇನ್ಪೋಸಿಸ್ ಅಮೇರಿಕಾದ ಇಂಡಿಯಾನ ಪೋಲಿಸ್ ನಲ್ಲಿ ತನ್ನ ಶಿಕ್ಷಣ ಕೇಂದ್ರವನ್ನು ಆರಂಭಿಸಲಿದೆ.
  •  ಗೊಯಾಂಗ್ (ದಕ್ಷಿಣ ಕೊರಿಯಾ) : ಸಂಪೂರ್ಣ ಅಣ್ವಸ್ತ್ರ ನಿಶಸ್ತ್ರೀಕರಣ ಮತ್ತು ವಿಭಜಿತ ಪರ್ಯಾಯ ದ್ವೀಪದಲ್ಲಿ ಕಾಯಂ ಶಾಂತಿ ಮರು ಸ್ಥಾಪಿಸಲು ಬದ್ದವಾಗಿರುವುದಾಗಿ ಉತ್ತರ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳ ನಾಯಕರು ಶುಕ್ರವಾರ ಘೋಷಿಸಿದ್ದಾರೆ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮಾನ್ ಜೀ - ಇನ್ ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರಕ್ಕೆ ಬಂದಿದ್ದಾರೆ.
  • ವಾಷಿಂಗ್ ಟನ್ 9000 ನೇಪಾಳಿ ವಲಸಿಗರಗೆ ನೀಡಿದ್ದ ತಾತ್ಕಾಲಿಕ ಭದ್ರತೆಯನ್ನು ಹಿಂದಕ್ಕೆ ಪಡೆಯಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದ್ದು. ದೇಶ ಬಿಡಬೇಕು ಇಲ್ಲವೆ ಕ್ರಮಬದ್ದವಾಗಿ ನೆಲೆಸಬೇಕು  ಎಂದು ಸೂಚಿಸಿದೆ.


1 comment:

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...