Wednesday, May 2, 2018

ಬುಧವಾರ ಏಪ್ರಿಲ್ 25-2018


  •  ಹೆಚ್ 1 ಬಿ ವೀಸಾದಾರರು ಸಂಗಾತಿಗಳು (ಗಂಡ-ಹೆಂಡತಿ) ಹೊಂದಿರುವ, ಕಾನೂನು ಬದ್ದವಾಗಿ ಕೆಲಸ ಮಾಡುವ ಅವಕಾಶವನ್ನು ರದ್ದು ಪಡಿಸಲು ಅಮೇರಿಕಾ ಸರ್ಕಾರ ಚಿಂತನೆ ನಡೆಸಿದೆ. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
  • ಮಂಡ್ಯ ಶಾಸಕ ಅಂಬರೀಶ್ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಮಂಗಳವಾರ ಕಾಂಗ್ರೆಸ್ ನೀಡಿದ್ದ ಟಿಕೆಟ್ ನಿರಾಕರಿಸುವುದರ ಜೊತೆಗೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
  • ಈ ರೋಡು, ತಮಿಳುನಾಡು : ದಂತ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ವೀರಪ್ಪನ್ ನ ಮೂವರು ಬಂಟರನ್ನು ಸತ್ಯಮಂಗಲ ನ್ಯಾಯಾಲಯ ಖುಲಾಸೆಗೊಳಿಸಿದೆ.
  • ಮರಣದಂಡನೆ ವಿಧಿಸಲು ಹಲವು ವಿಧಾನಗಳಿದ್ದರು ನೇಣಿಕೆ ಏರಿಸುವುದು ಅತ್ಯಂತ ತ್ವರಿತವಾಗಿ ಜೀವ ತೆಗೆಯುವ ವಿಧಾನ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ತಿಳಿಸಿದೆ. ಅಪರಾಧ ಪ್ರಕ್ರಿಯಾ ಸಂಹಿತೆಯ 354(5)ನೇ ಸೆಕ್ಷನ್  ಅಡಿಯಲ್ಲಿನ ಈ ಶಿಕ್ಷೆ ಕ್ರೂರ ಅಮಾನವೀಯ ಎಂದು ಪ್ರಮಾಣ ಪತ್ರದಲ್ಲಿ ಹೇಳಿದೆ.
  • ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ವಾಗ್ದಾಂಡನೆ ಪ್ರಸ್ತಾಪ ತಿರಸ್ಕರಿಸುವ ನಿರ್ಧಾರವನ್ನು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮಂಗಳವಾರ ಸಮರ್ತಿಸಿಕೊಂಡಿದ್ದಾರೆ.
  • ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಡೋದರಾದ ಡಿಪಿಐಎಲ್ ಪ್ರೈ. ಲಿ. ಕಂಪನಿಗೆ ಸೇರಿದ 1.122 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಈ ಆಸ್ತಿಯಲ್ಲಿ ಪವನ ವಿದ್ಯುತ್ ಘಟಕ ಮತ್ತು ನಿರ್ಮಾಣ ಹಂತದಲ್ಲಿರುವ ಹೋಟೆಲ್ ಸೇರಿದೆ.
  •  ಸರ್ಕಾರಿ ಸಾಮ್ಯದ 3 ವಿಮಾ ಕಂಪನಿಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಗಳನ್ನು ವಿಲೀನಗೊಳಿಸಿ ಒಂದೇ ವಿಮಾ ಕಂಪನಿ ರಚನೆ ಮಾಡುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಚೆಟ್ಲಿ ಅವರು 2018-19ರ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.
  • ನವದೆಹಲಿ : ಪ್ರಸಕ್ತ ಆರ್ಥಿಕ ವರ್ಷದಲ್ಲಿ (2018-19) 11 ಲಕ್ಷ ಕೋಟಿ ಕೃಷಿ ಸಾಲ ನೀಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎಂದು ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಆಶಿಕ್ ಕುಮಾರ್ ಭೂತಾನಿ ತಿಳಿಸಿದ್ದಾರೆ.
  •  ಜಾಂಗ್ವಾನ್, ದಕ್ಷಿಣ ಕೊರಿಯಾ : 'ಶಹಜಾರ್ ರಿಜ್ಜಿ’ ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತಕ್ಕೆ ಮೊಲದ ಪದಕ ಗಳಿಸಿಕೊಟ್ಟರು. ಅವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಈ ಸಾಧನೆಗೆ ಮಾಡಿದರು.
  • ಬ್ಯಾಂಕಾಕ್  : ಭಾರತದ ಭಾಕ್ಸರ್ ಗಳಾದ ಅಂಕಿತ್ , ಭವೇಶ್ ಕಟ್ಟಿಮನಿ ಕುಮಾರ್ ಮತ್ತು ಅಮನ್ ಅವರು ಮುಂಬರುವ ಯೂತ್ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. 

1 comment:

ಬುಧವಾರ ಮೇ 16-2018

ಬೆಂಗಳೂರು : ರಾಜ್ಯ ವಿಧಾನಸಭೆಗೆ ಅತಂತ್ರ ಪ್ರಜಾ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿಯಲು ಜಿದ್ದಾಜಿದ್ದಿ ಕಸರತ್ತು ನಡೆದಿದ...